ಪ್ರಕಟಣೆ
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಗೌತಮ ಸೂರ್ಯ

ಕುಶಾಲನಗರ, ಫೆ 19: ಗೌತಮ ಸೂರ್ಯ ಕಥೆ.ಚಿತ್ರಕಥೆ. ನಿರ್ದೇಶನದಲ್ಲಿ . ವಿಶ್ವ ಕುಂಬೂರು ನಾಯಕ ನಟನಾಗಿ ನಟಿಸಿದ ..ನಂಬಿಕೆ.. ಕಿರುಚಿತ್ರ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ರಾಯಲ್ ಫಿಲಂ ಇನ್ಸ್ಟಿಟ್ಯೂಟ್ ಹಾಗೂ ನಿಸರ್ಗ ಪ್ರೇರಣ ಸಂಸ್ಥೆ ಇವರ ಆಶ್ರಯದಲ್ಲಿ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಿರುಚಿತ್ರ ಅವಾರ್ಡ್ ಕಾರ್ಯಕ್ರಮದಲ್ಲಿ .ರಾಜ್ಯದ ನಾನಾ ಭಾಗಗಳ ಸುಮಾರು 60 ಕಿರುಚಿತ್ರಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಕಿರುಚಿತ್ರ ಪ್ರದರ್ಶನ ನಡೆಯಿತು ಅದರಲ್ಲಿ ..ನಂಬಿಕೆ ..ಕಿರುಚಿತ್ರಕ್ಕೆ .ಅತ್ಯುತ್ತಮ ನಿರ್ದೇಶಕ. ಈ ಕಿರುಚಿತ್ರದ ನಾಯಕ ವಿಶ್ವಕುಂಬೂರು ರವರಿಗೆ ..ಕಲಾರತ್ನ..ಹಾಗೂ ಉತ್ತಮ ಕಿರುಚಿತ್ರ ನಂಬಿಕೆ ಎಂಬ ಪ್ರಶಸ್ತಿಯನ್ನು ಪಡೆಯಿತು .ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು.ಸಿನಿಮಾ ರಂಗದ ಆನೇಕ ಕಲಾವಿದರು. ತಂತ್ರಜ್ಞಾನ ಬಳಗದವರು.ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.