ಕುಶಾಲನಗರ, ಫೆ 19: ಗ್ರಾಮಸ್ಥರು ನೀರನ್ನು ಅನಗತ್ಯ ಪೋಲು ಮಾಡದಂತೆ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಕರೆ ನೀಡಿದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಟಿಸಿರುವ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಭಾಸ್ಕರ್ ನಾಯಕ್, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕೂಡುಮಂಗಳೂರು ಕೂಡ್ಲೂರು, ವಿಜಯನಗರ, ಬಸವನತ್ತೂರು, ಸುಂದರನಗರ, ಚಿಕ್ಕತ್ತೂರು, ಗ್ರಾಮಸ್ಥರಲ್ಲಿ ಮನವಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಂತರ್ಜಲ ಮಟ್ಟ ಹಾಗೂ ಕಾವೇರಿ ನದಿ ತೀರದಲ್ಲಿ ನೀರಿನ ಮಟ್ಟ ಕುಸಿದಿದೆ ಆದ್ದರಿಂದ ಗ್ರಾಮ ಪಂಚಾಯಿತಿಯ ನೀರು ಸರಬರಾಜು ಕೈಗೊಳ್ಳಲು ತುಂಬಾ ಕಷ್ಟಕರವಾಗಿದೆ ಇಂತಹ ಸಮಯದಲ್ಲಿ ಸಾರ್ವಜನಿಕರಾದ ನಾವುಗಳು ನೀರಿನ ಅಮೂಲ್ಯತೆಯನ್ನು ಅರಿತು ಸಂರಕ್ಷಿಸಬೇಕು ಎಲ್ಲಾ ಮನೆಗಳಲ್ಲೂ ಸಹ ನಲ್ಲಿಗಳಿಗೆ ಟ್ಯಾಪ್ ಅಳವಡಿಸಬೇಕು ಕುಡಿಯುವ ನೀರನ್ನು ಬೇರೆ ಯಾವುದೋ ಉದ್ದೇಶಕ್ಕೆ ಅನವಶ್ಯಕವಾಗಿ ಬಳಸಬಾರದು ಸಾರ್ವಜನಿಕರು ನಲ್ಲಿಯನ್ನು ಕಳಚಿ ಉಪಯೋಗಿಸುತ್ತಿದ್ದು ಕಂಡುಬಂದಲ್ಲಿ ಗ್ರಾಮ ಪಂಚಾಯಿತಿಯಿಂದ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಪಂಚಾಯತಿ ವತಿಯಿಂದ ಕಳಕಳಿಯ ಮನವಿ ಮಾಡುವುದಾಗಿಯೂ ಮತ್ತು ಈ ಕುರಿತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಪಂಚಾಯಿತಿ ವಾಹನದಲ್ಲಿ ಪ್ರಚಾರ ಮಾಡಲಾಗುವುದು ಎಂದು ಅಧ್ಯಕ್ಷ
ಭಾಸ್ಕರ ನಾಯಕ್ ರವರು ತಿಳಿಸಿದ್ದಾರೆ.
Back to top button
error: Content is protected !!