ಟ್ರೆಂಡಿಂಗ್

ಕೆರೆಕಟ್ಟೆಗಳಿಗೆ ನೀರುಣಿಸುವ ಯೋಜನೆ ಸತ್ಯವನ್ನು ಮರೆಮಾಚಲಾಗಿದೆ: ಮಾಜಿ ಶಾಸಕ ಕೆ.ಮಹದೇವ ಆರೋಪ

ಪಿರಿಯಾಪಟ್ಟಣ, ಜ 25:ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಿಂದ 150 ಕೆರೆ ಕಟ್ಟೆಗಳಿಗೆ ನೀರುಣಿಸುವ ಉದ್ಘಟನಾ ಕಾರ್ಯಕ್ರಮದಲ್ಲಿ ಹಾಲಿ ಸಚಿವ ಕೆ ವೆಂಕಟೇಶ್ ಸಾರ್ವಜಕರಿಗೆ ಸತ್ಯವನ್ನು ಮರೆಮಾಚಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ ಎಂದು ಮಾಜಿ ಶಾಸಕ ಕೆ ಮಹದೇವ್ ಆರೋಪಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ತಾಲ್ಲೋಕಿನ ಎಲ್ಲಾ ಅಭಿವೃದ್ಧಿಗಳನ್ನು ನಾನೇ ಮಾಡಿದ್ದೇನೆ ಎಂದು ಹೇಳುವ ಮೂಲಕ ತಾಲೂಕಿನ ಜನತೆಗೆ ಸುಳ್ಳು ಬುರುಡೆ ಬಿಡುತ್ತಿದ್ದಾರೆ. ತಾಲೂಕಿನ 150 ಕೆರೆಗಳಿಗೆ ನೀರು ಉಳಿಸುವ ಯೋಜನೆಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕು ಸ್ಥಾಪನೆ ಮಾಡಿದ್ದು ನಿಜ. ಆದರೆ ಇದಕ್ಕೆ ಚಾಲನೆ ಸಿಗಲಿಲ್ಲ. ಗುತ್ತಿಗೆದಾರರನ್ನು ಈ ಯೋಜನೆಗೆ ಅಗತ್ಯವಿರುವ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಕೈಕಟ್ಟಿ ಕುಳಿತಿದ್ದನ್ನು 2018ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಆ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಯೋಜನೆ ಕುಂಠಿತವಾಗಬಾರದು ಎಂಬ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿ ಒಂದೇ ಬಾರಿಗೆ 90 ಕೋಟಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಪ್ರಾರಂಭಿಸಿದನು ಕಾಮಗಾರಿಯು ಸಹ ಶರವೇಗದಲ್ಲಿ ನಡೆಯುತ್ತಿತ್ತು. ಆದರೆ ದುರದೃಷ್ಟವಸತ ರೈತರು ತಮ್ಮ ಜಮೀನಿನ ಮೇಲೆ ಕೆಲಸ ಮಾಡಲು ಅಡ್ಡಿಪಡಿಸಿದರಲ್ಲದೆ, ಕರೋನ ಸಂಕಟ , ಅತಿವೃಷ್ಟಿಯಿಂದಾಗಿ ಕಾಮಗಾರಿ ವಿಳಂಬವಾಯಿತು ಇನ್ನುಳಿದ ಎರಡು ವರ್ಷದಲ್ಲಿ ಕಾಮಗಾರಿಗೆ ಅಗತ್ಯವಿರುವ ಎಲ್ಲಾ ಸಹಕಾರ ಪಡೆಯಲು ಅಂದಿನ ಜಲಸಂಪನ್ಮೂಲ ಸಚಿವರನ್ನು ಕರೆಸಿ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಿದೆ. ಈ ಯೋಜನೆಯು 2017ರಲ್ಲಿ ಪ್ರಾರಂಭವಾಗಿದ್ದರೂ ನನ್ನ ಅವಧಿಯಲ್ಲಿ 175 ಕೋಟಿ ಹಣ ಮಂಜೂರು ಮಾಡಿಸಿ ಶೇಕಡಾ 75ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ ಇಂದಿಗೂ ಸಹ ಶೇಕಡ 25 ರಷ್ಟು ಕಾಮಗಾರಿ ಬಾಕಿ ಇದ್ದು ಗುತ್ತಿಗೆದಾರರಿಗೆ ಸರಿಸುಮಾರು 75 ಕೋಟಿ ಹಣ ಬಾಕಿ ಬರಬೇಕಾಗಿದೆ ಆದರೂ ಕಾಮಗಾರಿಯನ್ನು ಪೂರ್ಣಗೊಳಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ತಾಲೂಕಿನ 33 ಹಳ್ಳಿಗಳಿಗೆ ಜೆಜೆಎಂ ಅಡಿ 300 ಕೋಟಿಗಳ ವೆಚ್ಚದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕೈಗೊಂಡ ಯೋಜನೆ ಯಾರ ಅವಧಿಯಲ್ಲಿ ಪ್ರಾರಂಭ ಮಾಡಿದ್ದು ಎಂಬುದನ್ನು ತಿಳಿದುಕೊಳ್ಳಲಿ. ಆವರ್ತಿ ಮಹದೇವ ಹೈಕೋರ್ಟಿನಲ್ಲಿ ಕೇಸು ಹಾಕಿದ ಪರಿಣಾಮ ಈ ಯೋಜನೆಯನ್ನು ಉದ್ಘಾಟನೆ ಮಾಡಲು ಸಾಧ್ಯವಾಗಲಿಲ್ಲ ಇಲ್ಲದಿದ್ದರೆ ಅಂದೇ ಉದ್ಘಾಟನೆ ಮಾಡುತ್ತಿದೆ. ತಾಲ್ಲೂಕಿನ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದೇನೆಂದು ಬೊಬ್ಬೆ ಹೊಡೆಯುವ ಸಚಿವರು ಯಾರ ಅವಧಿಯಲ್ಲಿ ಯಾವ ಯಾವ ಕೆಲಸಗಳು ನಡೆದಿದೆ ಎಂಬ ಅಂಕಿ ಅಂಶದ ಸಮೇತ ಚರ್ಚೆಗೆ ಬಂದರೆ ಚರ್ಚಿಸಲು ಸಿದ್ಧವಿದ್ದೇನೆ ಎಂದು ಪಥ ಆಹ್ವಾನ ನೀಡಿದರು

ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ , ಕಂಪಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕುಮಾರ್ , ಹಂಡಿತವಳ್ಳಿ ರಾಮಚಂದ್ರ ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!