ಟ್ರೆಂಡಿಂಗ್

ಕನ್ನಡ ಬರಹಗಳ ಕೈಪಿಡಿಯ ಸ್ನೇಹ ಕೂಟ

ಕುಶಾಲನಗರ, ಜ‌ 21:
ಫೇಸ್ ಬುಕ್ ನಲ್ಲಿಯೇ ಕವಿತೆ ಹಾಗೂ ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಕನ್ನಡ ಬರಹಗಳ ಕೈಪಿಡಿಯ ” ಸ್ನೇಹ ಕೂಟ ” ಕನ್ನಡ ಕಥಾಗುಚ್ಚ ದ ಮಂದಿಗೆ ಕಣಿವೆಯ ರಾಮಲಿಂಗೇಶ್ವರ ಸಭಾಂಗಣ ವೇದಿಕೆಯಾಗಿತ್ತು.
ಕನ್ನಡ ಕಥಾ ಗುಚ್ಛ ಬರಹಗಳ ಕೈಪಿಡಿಯ ಜಾಲತಾಣದ ಸಾಹಿತ್ಯ ಬಳಗದ ಸ್ನೇಹ ಕೂಟದ ಸಂಸ್ಥಾಪಕಿ ಲತಾ ಜೋಷಿ ನೇತೃತ್ವದಲ್ಲಿ ಧಾವಿಸಿದ್ದ ಹೊರ ಜಿಲ್ಲೆಗಳ ನೂರಾರು ಮಂದಿ ಸಾಹಿತಿಗಳು ಸೇರಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕೊಡಗಿನ ಕಲೆ, ಸಂಸ್ಕ್ರತಿ, ಆಚಾರ ವಿಚಾರಗಳು ಮೇಳೈಸುವ ವಿವಿಧ ಕಲಾ ಪ್ರಕಾರಗಳು ನಡೆದವು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ,
ಅನೇಕ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಸ್ನೇಹ ಕೂಟದ ಅಧ್ಯಕ್ಷೆ ಲತಾ ಜೋಷಿ ಮಾತನಾಡಿ, ಸಂಯೋಜಕಿ ಸುಮಾ ಕಳಸಾಪೂರ್ ಫೇಸ್ ಬುಕ್ ಸಾಹಿತ್ಯ ವೇದಿಕೆ ಕಳೆದ ಆರು ವರ್ಷಗಳ ಹಿಂದೆ ಆರಂಭವಾಯಿತು ಎಂದರು.
ಇದರಲ್ಲಿ ಸಾಹಿತ್ಯ ಪ್ರಾಕಾರಗಳ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಮಂದಿ ಸದಸ್ಯರಾಗಿದ್ದಾರೆ.
ನಮ್ಮಲ್ಲಿರುವ ಸದಸ್ಯರುಗಳೇ ಬರೆಯುವ ಅರ್ಥಗರ್ಭಿತ ಸಂಗ್ರಹಗಳನ್ನು ಕಲೆ ಹಾಕಿ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದೇವೆ.
ಸ್ನೇಹ ಕೂಟದ ಸದಸ್ಯರೆಲ್ಲರೂ ಫೇಸ್ ಬುಕ್ ನಲ್ಲಿಯೇ ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡು ವರ್ಷದಲ್ಲಿ ಎರಡು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ.
ಪ್ರತೀ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಾಹಿತ್ಯ ಪ್ರವಾಸ ಹಮ್ಮಿಕೊಂಡು ಅಲ್ಲಿನ ಪ್ರಕೃತಿ, ಪರಿಸರ ಹಾಗೂ ಜನಜೀವನದ ಜೊತೆಗೆ ಅಲ್ಲಿನ ಸಾಂಸ್ಕ್ರತಿಕ ವೈಭವಗಳನ್ನು ಅರಿಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಕೊಡವ ಸಮಾಜದ ಮಹಿಳೆಯರು ಕೊಡವ ಹಾಡಿಗೆ ನೃತ್ಯ ನಡೆಸಿಕೊಟ್ಟರು.
ಮಿಲನ ಭರತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆ ಭಾಷೆ ಸಂಸ್ಕ್ರತಿ ಸಾರುವ ಸುಗ್ಗಿ ಸುವ್ವಾಲೆ ನೃತ್ಯ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ. ಜಿ. ಅನಂತಶಯನ, ಜಯಶ್ರೀ ಅನಂತ ಶಯನ, ರಂಜಿತ್ ಹಾಗೂ ಕೌಸರ್ ಅವರಿಂದ ಹುತ್ತರಿ ಹಾಡು, ಕೊಕ್ಕಲೇರಾ ಧರಣಿ ತಂಡದಿಂದ ಕನ್ನಡ ಹಾಡು, ಭಾವಗೀತೆ, ಜಾನಪದ ಗೀತೆ ಮೊದಲಾದ ನೃತ್ಯ ವೈಭವಗಳು ನಡೆದವು.
ಕನ್ನಡ ಕಥಾ ಗುಚ್ಛದ ಸಂಘಟಕ ಚಾಮರಾಜನಗರದ ಬಾಹುಬಲಿ ಜಯರಾಜು, ಹಿರಿಯ ಸಂಘಟಕ ಕೆ.ವಿ.ಶಶಿಧರ್, ಆಪ್ತ ಸಲಹೆಗಾರ ಡಿ.ಮಲ್ಲಾರೆಡ್ಡಿ,
ಪ್ರಮುಖರಾದ ಗಿರೀಶ್ ಕುಲಕರ್ಣಿ, ಚಂದ್ರಶೇಖರ್, ರಾಘವೇಂದ್ರ ಇನಾಮ್ ದಾರ್, ಹರೀಶ್ ಕುಮಾರ್ ರಾವ್, ಸುಜಾತ ರೆಡ್ಡಿ, ಇಂಧೂಮಣಿ,
ಕೊಡಗಿನ ಸದಸ್ಯರಾದ ನೌಷಧ್ ಜನ್ನತ್, ಇರ್ಫಾನ್ ಹಸನ್ ಕುಟ್ಟಿ, ಸೌಮ್ಯ ಉಮೇಶ್, ಕೃಪಾದೇವರಾಜು,ಹೇಮಂತ್ ಪಾರೆರ, ನೂತನ್, ಶಿಲ್ಪ, ಪವಿತ್ರ, ರೇಣುಕಾ, ಅನಂತಶಯನ ಹಾಗೂ ಮಾಲತಿ ಭಾರದ್ವಾಜ್, ಸೂರ್ಯನಾರಾಯಣ ಹಾಗೂ ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಇದ್ದರು.
ಆಗಮಿತ ಅತಿಥಿಗಳಿಗೆ ಸಾಹಿತಿ ಕಣಿವೆಯ ಭಾರದ್ವಾಜ್ ಕುಟುಂಬ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟೋಪಚಾರಗಳ ವ್ಯವಸ್ಥೆ ಕಲ್ಪಿಸಿದ್ದರು.
ಈ ಸಂದರ್ಭ ವೈದ್ಯ ಸೂರ್ಯಕುಮರ್, ಬಿ. ಜಿ. ಅನಂತ ಶಯನ ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!