ಕುಶಾಲನಗರ, ಜ 21 : ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರಮಹಾಸ್ವಾಮೀಜಿಯವರ ಐದನೇ ವರ್ಷದ ಪುಣ್ಯಸ್ಮರಣೆ ಭಾನುವಾರ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು.
ಸಿದ್ದಗಂಗಾ ಶ್ರೀ ಭಕ್ತ ಮಂಡಳಿ ಹಾಗೂ ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು.
ಕುಶಾಲನಗರದ ಕಾಯಕ ಯೋಗಿಗಳಾದ ಪೌರ ಕಾರ್ಮಿಕರ ಸಮ್ಮುಖದಲ್ಲಿ
ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಹಾಗೂ ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಏನೆಲ್ಲಾ ಸಾರ್ಥಕ ಸೇವೆ ಮಾಡಬಹುದೋ ಅದಕ್ಕಿಂತ ಮಿಗಿಲಾದ ಸೇವೆ ಮಾಡಿ ಜಗತ್ತು ಕಂಡ ಶ್ರೇಷ್ಟ ಸಂತರಾದರು. ಅವರು ಬದುಕಿದ್ದಾಗ ನಾವು ಬದುಕಿದ್ದೆವಲ್ಲಾ ಎಂಬುದು ನಮ್ಮ ಸೌಭಾಗ್ಯ ಎಂದರು.
ಇದೇ ಸಂದರ್ಭ ಧಾರ್ಮಿಕ ಸೇವಾ ಕರ್ತ ಚಂದ್ರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅವರನ್ನು ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ ಶ್ರೀಗಳ ಭಾವ ಚಿತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪಟ್ಟಾಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್, ಉಪನ್ಯಾಸಕ ಗುರುಸ್ವಾಮಿ, ಟಿ.ಬಿ.ಮಂಜುನಾಥ, ಶಶಿಕುಮಾರ್,
ಸಿದ್ದಗಂಗಾ ಭಕ್ತ ಮಂಡಳಿಯ ಉಮೇಶ್, ಗಿರೀಶ್, ವೇದಾವತಿ, ನಟರಾಜು ಇದ್ದರು.
ಪೂಜಾ ಕಾರ್ಯದ ಬಳಿಕ ಪೌರಕಾರ್ಮಿಕರಿಗೆ ದಾಸೋಹ ಹಮ್ಮಿಕೊಳ್ಳಲಾಗಿತ್ತು.
Back to top button
error: Content is protected !!