ಸೋಮವಾರಪೇಟೆ, ಜ 19: ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಸರ್ಕಾರದ ಘೋಷಣೆ ಸ್ವಾಗತಾರ್ಹ ಕ್ರಮ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ತಿಳಿಸಿದ್ದಾರೆ.
12 ನೆ ಶತಮಾನದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ,ಜಾತೀಯತೆ,ಕಂದಾಚಾರದ ವಿರುದ್ಧ ಹೋರಾಡಿದ ಧೀಮಂತರು, ಅಂದೆ ಅನುಭವ ಮಂಟಪ ಸ್ಥಾಪಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದವರು ಎಂದ ಅವರು ಕರ್ನಾಟಕದ ಆಚಾರ,ವಿಚಾರ ಸಾಂಸ್ಕೃತಿಕ ಸೊಗಡನ್ನು ಜಗತ್ತಿಗೆ ಪರಿಚಯಿಸಿದವರು.
ಇಂತಹ ಮಹಾನ್ ವ್ಯಕ್ತಿಯನ್ನು ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ನೇತೃತ್ವದ ಮಂತ್ರಿಮಂಡಲ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ನಿರ್ಧರಿಸಿ ಘೋಷಿರುವುದು ಸ್ವಾಗತಾರ್ಹ ಹಾಗು ಅಭಿನಂದನಾರ್ಹಕ್ರಮವಾಗಿದ್ದು,
ಬಸವಾನುಯಾಯಿಗಳಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದ್ದಾರೆ.
Back to top button
error: Content is protected !!