ಕುಶಾಲನಗರ, ಜ 19: ನಡೆದಾಡುತ್ತಿದ್ದ ದೇವರೆಂದೇ ಭಕ್ತರ ಮನದಲ್ಲಿ ಮನೆ ಮಾಡಿದ್ದ ತುಮಕೂರಿನ ಸಿದ್ದಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಹೆಸರಿನಲ್ಲಿ ಗುಡ್ಡೆಹೊಸೂರಿನ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ವೃತ್ತ ವೀಗ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತವನ್ನಾಗಿ ನಿರ್ಮಾಣ ಮಾಡಲಾಗಿದೆ.
ಕಳೆದ 2017 ರಲ್ಲಿ ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷರಾಗಿದ್ದ ಭಾರತಿ ಅವರ ಅಧ್ಯಕ್ಷರಾಗಿದ್ದಾಗ ಶ್ರೀ ಸಿದ್ದಗಂಗಾ ಭಕ್ತ ಮಂಡಳಿಯ ಮನವಿಗೆ ಓಗೊಟ್ಟ ಪಂಚಾಯಿತಿ ಆಡಳಿತ ಮಂಡಳಿ ಯಲ್ಲಿನ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಶ್ರೀಗಳ ಹೆಸರಲ್ಲಿ ವೃತ್ತಕ್ಕೆ ನಾಮಕರಣ ಮಾಡಲು ನಿರ್ಣಯಿಸಲಾಗಿತ್ತು.
ಅಂದಿನಿಂದ ಇಂದಿನತನಕ ವೃತ್ತದಲ್ಲಿ ತಾತ್ಕಾಲಿಕವಾಗಿ ಶ್ರೀಗಳ ಭಾವ ಚಿತ್ರದ ಪ್ಲೆಕ್ಸ್ ಇಡಲಾಗಿತ್ತು.
ಇದೀಗ ಗುಡ್ಡೆಹೊಸೂರಿನ ವೀರಶೈವ ಸಮಾಜದ ವತಿಯಿಂದ ವೃತ್ತಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಕೆತ್ತನೆ ಮಾಡಿದ ಕಲ್ಲನ್ನು ನೆಟ್ಟು ಸಿದ್ದಪಡಿಸಲಾಗುತ್ತಿದೆ.
ನೂತನ ವೃತ್ತ ಭಾನುವಾರ ಶ್ರೀಗಳ ಪುಣ್ಯಸ್ಮರಣೆಯ ದಿನದಂದು ಲೋಕಾರ್ಪಣೆಗೊಳ್ಳಲಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ಸಿದ್ದಗಂಗಾ ಶ್ರೀ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್
ಮೂರ್ತಿ ತಿಳಿಸಿದ್ದಾರೆ.
Back to top button
error: Content is protected !!