ಕುಶಾಲನಗರ, ಜ: 15: ಇಂದಿನ ವಿದ್ಯಾರ್ಥಿಗಳೂ ಸೇರಿದಂತೆ ಸಮಾಜದ ಪ್ರತಿಯೊಬ್ಬರು ಹನ್ನೆರಡನೇ ಶತಮಾನದ ವಚನಕಾರರಲ್ಲಿದ್ದ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಂಡು ಇಂದಿನ ಕಾಲಘಟ್ಟದಲ್ಲಿ ಅದನ್ನು ಬಳಕೆ ಮಾಡಿದಲ್ಲಿ ಸುಭದ್ರ ಹಾಗೂ ಸುಂದರ ಸಮಾಜ ಕಟ್ಟಲು ಸಾಧ್ಯ ಎಂದು ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಕರೆಕೊಟ್ಟರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಶರಣರ ವಚನಗಳ ಸಾರವರಿತು ಅದರಂತೆ ನಡೆದಲ್ಲಿ ಸಾಮಾಜಿಕ ಶಾಂತಿ ಸೌಹಾರ್ದ ಸಾಧ್ಯವಿದೆ ಎಂದರು.
ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಶಿಕ್ಷಕ ಕೆ.ಆರ್.ರಮೇಶ್, ಪುಟ್ಟರಾಜು ಮತ್ತಿತರರಿದ್ದರು.
Back to top button
error: Content is protected !!