ಟ್ರೆಂಡಿಂಗ್

ಕಳೆದುಕೊಂಡ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರತಿಮಾ ಮತ್ತು ಲಕ್ಷಿತಾ

ಕುಶಾಲನಗರ, ಜ 14: ಮೈಸೂರಿನಿಂದ ಕುಶಾಲನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿ ಕುಶಾಲನಗರದ ಬಸ್ಸು ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಒಂದು ಬ್ಯಾಗ್ ಬಸ್ಸಿನಲ್ಲಿ ಪ್ರತಿಮಾ ಮತ್ತು ಲಕ್ಷಿತಾ ಳಿಗೆ ಬಿದ್ದು ಸಿಕ್ಕಿದೆ. ಬ್ಯಾಗ್ ತೆಗೆದು ನೋಡಿದಾಗ ಮೂವತ್ತು ಸಾವಿರ ಇದ್ದುದನ್ನು ಗಮನಿಸಿದ ಲಕ್ಷಿತಾ ತನ್ನ ತಂದೆಯವರ ಗಮನಕ್ಕೆ ತಂದು ತನ್ನ ತಂದೆಯವರನ್ನು ಬಸ್ಸು ನಿಲ್ದಾಣಕ್ಕೆ ಬರಲು ತಿಳಿಸಿ ಕುಶಾಲನಗರ ಡಿವೈಎಸ್ ಪಿ.ಯವರ ಗಮನಕ್ಕೆ ತರಲಾಯಿತು.ಹಣದ ಚೀಲ ಟಿಬೇಟಿಯನ್ನರದೆ ಎಂದು ತಿಳಿದ ಲಕ್ಷಿತಾ ನಿಲ್ದಾಣದಲ್ಲಿ ಹಣದ ಮಾಲೀಕರನ್ನು ಹುಡುಕುತ್ತಿದ್ದಾಗ ಬಸ್ಸಿನ ಮುಂಭಾಗದಲ್ಲಿ ಕುಳಿತ್ತಿದ್ದ ಟಿಬೇಟಿಯನ್ ವ್ಯಕ್ತಿಯನ್ನು ಬಸ್ಸು ನಿಲ್ದಾಣದಲ್ಲಿ ಪತ್ತೆ ಮಾಡಿ ಹಣವನ್ನು ಮಾಲಿಕ ತುಂಬೋ ರವರಿಗೆ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಹಣ ಹಿಂದಿರುಗಿಸಿ
ಪ್ರಾಮಾಣಿಕತೆ ಮೆರೆದ ಪ್ರತಿಮಾ ಸೋಮವಾರಪೇಟೆಯ ತಾಕೇರಿ ನಿವಾಸಿ ಗುತ್ತಿಗೆದಾರ ಅರುಣ್ ರವರ ಧರ್ಮ ಪತ್ನಿ ಮೈಸೂರಿನ ರೇಡಿಯಂಟ್ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಲಕ್ಷಿತಾ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ಕಾನೂನು ವಿದ್ಯಾರ್ಥಿನಿಯಾಗಿದ್ದು ಉಪನ್ಯಾಸಕ ನಂಜುಂಡಸ್ವಾಮಿ ಮತ್ತು ಪುರಸಭೆ ಸದಸ್ಯೆ ಜಯಲಕ್ಷ್ಮಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.ಇವರಿಬ್ಬರ ಪ್ರಾಮಾಣಿಕತೆಗೆ ಬಸ್ಸು ನಿಲ್ದಾಣದಲ್ಲಿದ್ದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!