ಕುಶಾಲನಗರ ಅ 30: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ 2023ರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ತುಮಕೂರು ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಹಾಕಿ ಪಂದ್ಯಾಟದಲ್ಲಿ ಕೊಡಗು ಸರ್ಕಾರಿ ನೌಕರರ ತಂಡವು ಗೆಲುವು ಸಾಧಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಅಯ್ಕೆಗೊಂಡಿದೆ.
ಹಾಕಿ ಫೈನಲ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಕೋಚ್ ಬಿ.ಟಿ. ಪೂರ್ಣೇಶ್ ಅವರ ನೇತ್ರತ್ವದ ಕೊಡಗು ತಂಡವು ಬೀದರ್ ಜಿಲ್ಲೆಯ ತಂಡವನ್ನು ಎದುರಿಸಿ 6-1 ಗೋಲು ಗಳ ಮೂಲಕ ಸೋಲಿಸಿ ಜಯ ಸಾಧಿಸಿತು.
ವಿಜೇತ ಕೊಡಗು ತಂಡಕ್ಕೆ ಬಹುಮಾನವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ವಿತರಣೆ ಮಾಡಿದರು.
ತಂಡದ ಮೇಲ್ವಿಚಾರಕರಾಗಿ ಬಿ. ಟಿ. ಪೂರ್ಣೇಶ್, ತಂಡದ ನಾಯಕರಾಗಿ ಡ್ಯಾನಿ ಈರಪ್ಪ ತಂಡವನ್ನು ಮುನ್ನಡೆಸಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟವು ಒರಿಸ್ಸಾ ರಾಜ್ಯದಲ್ಲಿ ನಡೆಯಲಿದೆ.
Back to top button
error: Content is protected !!