ಕುಶಾಲನಗರ, ಆ 10:
ಓದುವ ಬೆಳಕು ಕಾರ್ಯಕ್ರಮದ ಭಾಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ಮಟ್ಟದ ಚದುರಂಗ ಸ್ಪರ್ಧೆಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧಾ ಕೂಟವನ್ನು ದೀಪ ಬೆಳಗುವ ಮೂಲಕ ಪಂಚಾಯತ್ ಅಧ್ಯಕ್ಷರಾದ ಚೆಲುವರಾಜು ಉದ್ಘಾಟಿಸಿದರು.
ಸ್ಪರ್ಧೆಗಳು ಸಬ್ ಜೂನಿಯರ್ ವಿಭಾಗ, ಜೂನಿಯರ್ ವಿಭಾಗ ಹಾಗೂ ಸೀನಿಯರ್ ವಿಭಾಗದಲ್ಲಿ ನಡೆಯಲ್ಪಟ್ಟು 40 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ 12 ಮಂದಿ ಹಿರಿಯ ನಾಗರಿಕರು ಭಾಗವಹಿಸಿ ಸ್ಪರ್ಧೆಗೆ ಮೆರುಗು ತಂದರು.
ವಿಜೇತರಿಗೆ ಬಹುಮಾನಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೆಲುವರಾಜು ಹಾಗೂ ಸದಸ್ಯರು ವಿತರಿಸಿದರು.
ಕ್ರೀಡಾಕೂಟದ ಆರ್ಬಿಟರ್ ಆಗಿ ಶಿಕ್ಷಣ ಸಂಯೋಜಕರಾದ ಶೇಖರ್ ಕಾರ್ಯ ನಿರ್ವಹಿಸಿದರು.
ಪಿಡಿಒ ಸುಮೇಶ್ ಪ್ರಾಸ್ತಾವಿಕ ನುಡಿಗಳಾಡಿದರು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಣಿ, ಆಸಿಫ್,ಜಗದೀಶ್, ಪಾರ್ವತಿ, ಹರಿಣಿ ಪ್ರಭಾಕರ್, ಸಂಗೀತ, ಕುಮಾರ್, ಸಂತೋಷ್, ಗಣೇಶ್, ವೇದಾವತಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದೇ ಸಂದರ್ಭ ವಿಶೇಷ ಚೇತನ ವಿದ್ಯಾರ್ಥಿನಿಯೋರ್ವಳ ಉತ್ಸಾಹವನ್ನು ಪರಿಗಣಿಸಿ ವಿಶೇಷ ಬಹುಮಾನ ನೀಡಲಾಯಿತು. ಕುಶಾಲನಗರದ ಚೆಸ್ ಕೋಚಿಂಗ್ ಸೆಂಟರ್ ಮಾಲೀಕರಾದ ಆರೋಗ್ಯ ಸ್ವಾಮಿ ಈ ವಿದ್ಯಾರ್ಥಿನಿಗೆ ಉಚಿತವಾಗಿ ಚದುರಂಗ ಕೋಚಿಂಗ್ ನೀಡುವುದಾಗಿ ಘೋಷಿಸಿದರು.
Back to top button
error: Content is protected !!