Video Player
00:00
00:00
ಕುಶಾಲನಗರ, ಆ 10: ಖಾಸಗಿ ಕಛೇರಿಯೊಂದಕ್ಕೆ ಗ್ರಾಹಕನಂತೆ ಆಗಮಿಸಿದ ವ್ಯಕ್ತಿಯೊಬ್ಬ ಮೊಬೈಲ್ ಹೊತ್ತೊಯ್ದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ಟೆಕ್ ಶಾಫ್ ಕಛೇರಿಗೆ ಕೊರಿಯರ್ ಬಾಯ್ ರೀತಿಯಲ್ಲಿ ಆಗಮಿಸಿದ ವ್ಯಕ್ತಿ ಕಛೇರಿಯಲ್ಲಿ ಯಾರೂ ಇಲ್ಲದ ಸಂದರ್ಭ ಟೇಬಲ್ ಮೇಲಿದ್ದ ಬೆಲೆಬಾಳುವ ಮೊಬೈಲ್ ಹೊತ್ತೊಯ್ದಿದ್ದಾನೆ. ಈ ವೇಳೆ ಕಛೇರಿಯಲ್ಲಿದ್ದವರು ಕಾರ್ಯನಿಮಿತ್ತ ಮಹಡಿ ಮೇಲಿದ್ದರು. ಮೊಬೈಲ್ ಕಾಣದಾದಾಗ ಸಿಸಿ ಟಿವಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮೊಬೈಲ್ ಮಾಲೀಕ ಶಫೀಕ್ ಕುಶಾಲನಗರ ಠಾಣೆಗೆ ದೂರು ನೀಡಿದ್ದಾರೆ.