ಕುಶಾಲನಗರ, ಜು 26: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದ ಚೇತನ್ ಸಭಾಂಗಣದಲ್ಲಿ ಕರ್ನಾಟಕ ಪ್ರೋಗ್ರೆಸಿವ್ ಡೈರಿ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಹೈನುಗಾರಿಕೆ ತರಬೇತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಪ್ರೊಗ್ರೆಸಿವ್ ಡೈರಿ ಪಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೃಥ್ವಿ ಗೌಡ ನೆರವೇರಿಸಿದರು. ನಂತರ ಮಾತನಾಡಿದ ಅವರು, ರೈತರು ಹೈನುಗಾರಿಕೆಗೆ ನೂತನ ತಂತ್ರಜ್ಞಾನದ ಯೋಜನೆಗಳನ್ನು ಅಳವಡಿಕೆ ಮಾಡಿಕೊಂಡು ಹಾಲಿನ ಗುಣಮಟ್ಟವನ್ನು ಹೆಚ್ಚಿಸಿಕೊಂಡಾಗ ಅರ್ಥಿಕವಾಗಿ ಮುಂದುವರಿಯಲು ಒಳ್ಳೆಯ ಅವಕಾಶವಾಗುವುದು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಹೈನುಗಾರಿಕೆಯ ಸಂಪೂರ್ಣ ಸಮಾಲೋಚನೆ, ನೂತನ ಮಾಹಿತಿ, ಹೈನುಗಾರಿಕೆಯ ಬಗ್ಗೆ ಜಾಗೃತಿ ಮೂಡಿಸುವುದು , ಉತ್ತಮ ಪರಿಶುದ್ಧ ಹಾಗೂ ಒಳ್ಳೆಯ ಗುಣಮಟ್ಟ ಹೊಂದಿರುವ ಪಶುಗಳ ಸಾಕಾಣಿಕೆ ಬಗ್ಗೆ ಮಾಹಿತಿ, ಸಾಲ ಸೌಲಭ್ಯದ ವ್ಯವಸ್ಥೆ, ಪಶುಪಾಲನೆಯ ವೈದ್ಯಕೀಯ ನೆರವು, ಹೈನುಗಾರಿಕೆಗೆ ಬೇಕಾಗುವ ಉಪಕರಣಗಳು, ಪಶುಗಳಿಗೆ ವಿಮಾ ಯೋಜನೆ, ದೇಶೀಯ ಹಸುಗಳನ್ನು ವಿಸ್ತರಣೆ ಗೊಳಿಸುವುದು ಸೇರಿದಂತೆ ವಿವಿಧ ಹೈನುಗಾರಿಕೆ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕಾರ್ಯಗಾರದಲ್ಲಿ ನೀಡಲಾಯಿತು.
ಕಾರ್ಯಗಾರದಲ್ಲಿ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂರಾರು ಸದಸ್ಯರು ಭಾಗವಹಿಸಿದ್ದರು.
ಸಂಘದ ಪ್ರಮುಖರಾದ ಪ್ರಭುದೇವ್, ನಯನಾ ಶರತ್ , ಜಗದೀಶ್, ಶಿವಣ್ಣ, ದೀಪು, ಗೌತಮ್ ಸೇರಿದಂತೆ ಸಹಕಾರ ಸಂಘದ ವ್ಯಾಪ್ತಿಯ ರೈತರು ಭಾಗವಹಿಸಿದರು.
Back to top button
error: Content is protected !!