ಕುಶಾಲನಗರ, ಜು 26: ಹಾರಂಗಿ ಅಣೆಕಟ್ಟೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದಿಢೀರ್ ಭೇಟಿ ನೀಡಿ ನೀರಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ನೀರು ಸಂಗ್ರಹದ ಮಾಹಿತಿ ಕೇಂದ್ರಕ್ಕೆ ತೆರಳಿ ನೀರಿನ ಮಟ್ಟ ಮತ್ತು ಅಣೆಕಟ್ಟೆಯ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದರು.
ಸಮತೋಲನವನ್ನು ಕಾಪಾಡಿಕೊಂಡು ಹೆಚ್ಚುವರಿಯಾಗಿ ಬರುವ ನೀರನ್ನು ನದಿಗೆ ಹರಿಸುವಂತೆ ಸ್ಧಳದಲ್ಲಿದ್ದ ಇಂಜಿನಿಯರ್ ಸೂಚಿಸಿದರು.
ಈ ಸಂದರ್ಭ ಅಣೆಕಟ್ಟೆಯ ಭದ್ರತಾ ಪಡೆಯ ಪೋಲಿಸ್ ವೃತ ನಿರೀಕ್ಷಕ ಚಂದ್ರಶೇಖರ್, ಇಂಜಿನಿಯರ್ ಸಿದ್ದರಾಜು, ಸಿಬ್ಬಂದಿಗಳಾದ ಗಿರೀಶ್, ರೆಡ್ಡಿ ಇದ್ದರು.
Back to top button
error: Content is protected !!