ಸುದ್ದಿಗೋಷ್ಠಿ

ದೇಶದ ಅತ್ಯುನ್ನತ ಸೇನಾನಿಗಳಿಗೆ ಅಗೌರವ: ಆರೋಪಿ ಗಡಿಪಾರಿಗೆ ಕುಶಾಲನಗರ ಕೊಡವ ಸಮಾಜ ಆಗ್ರಹ

ಕುಶಾಲನಗರ, ನ 26:ಕೊಡಗಿನ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವಕೀಲ ವಿದ್ಯಾಧರ ಕೃತ್ಯವನ್ನು ಖಂಡಿಸಿರುವ ಕುಶಾಲನಗರ ಕೊಡವ ಸಮಾಜ ಆರೋಪಿಯ ಗಡಿಪಾರಿಗೆ ಒತ್ತಾಯಿಸಿದೆ.

ಈ ಬಗ್ಗೆ ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ದೇಶ ಕಂಡಂತಹ ಕೊಡಗಿನ ಇಬ್ಬರು ಮಹಾನ್ ಸೇನಾನಿಗಳ ಬಗ್ಗೆ ತುಚ್ಚವಾಗಿ ಮಾತನಾಡಿರುವುದು ಸಹಿಸಲಸಾಧ್ಯವಾದ ವಿಚಾರವಾಗಿದೆ. ಇದನ್ನು ಕುಶಾಲನಗರ ಕೊಡವ ಸಮಾಜ ಆಡಳಿತ ಮಂಡಳಿ ಹಾಗೂ ಸಮಸ್ತ ಸದಸ್ಯ ಬಳಗ ಖಂಡಿಸುತ್ತದೆ.ಇವರಿಬ್ಬರೂ ಕೇವಲ‌ ಕೊಡವ ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಎಲ್ಲಾ ಜಾತಿ ವರ್ಗದವರೂ ಆಧರಿಸುವ ಗೌರವಯುತ ಸೇನಾನಿಗಳು. ಇಂತಹವರ ಬಗ್ಗೆ ಅವಹೇಳನ ಮಾಡಿರುವ
ಆರೋಪಿ ವಿದ್ಯಾಧರನಿಗೆ ಸೂಕ್ತ ಕಾನೂನು ಕ್ರಮದ ಅವಶ್ಯಕತೆಯಿದೆ.
ಈತನ ಈ ಕೃತ್ಯ ಎಲ್ಲರಲ್ಲೂ ಅಸಮಧಾನ ತರಿಸಿದ್ದು, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸುವ ಮೂಲಕ
ಘನ ನ್ಯಾಯಾಲಯ ಈತನ ಈ ಕೃತ್ಯಕ್ಕೆ ಸೂಕ್ತ‌ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸುವಂತಾಗಬೇಕಿದೆ. ಇದು ನಡೆದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಾಲಯದ ಮೇಲೆ ಗೌರವ ಮತ್ತಷ್ಟು ಹೆಚ್ಚಲಿದೆ ಎಂದರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಪುಲಿಯಂಡ ಎಂ.ಚಂಗಪ್ಪ, ಕಾರ್ಯದರ್ಶಿ ವಾಂಚಿರ ಮನು ನಂಜುಂಡ, ಜಂಟಿ ಕಾರ್ಯದರ್ಶಿ ಕೇಕಡ ಸೋಮಣ್ಣ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!