ಸುದ್ದಿಗೋಷ್ಠಿ

ಮುಳ್ಳುಸೋಗೆಯ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ: 3 ದಿನ ಪೂಜಾ ಕೈಂಕರ್ಯ

ಕುಶಾಲನಗರ, ಫೆ 17:ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಫೆಬ್ರವರಿ 18, 19, 20 ರಂದು ಮೂರು ದಿನಗಳ‌ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀಮತ್ ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ ಸಮಿತಿ‌ ಉಪಾಧ್ಯಕ್ಷ ಎಂ.ಆರ್.ನಂಜುಂಡ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನರ್ ಪ್ರತಿಷ್ಠಾಪನ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ‌ ಪೂಜಾ ಕೈಂಕರ್ಯ, ಹೋಮ, ಹವನ ನಡೆಯಲಿದೆ. 18 ರಂದು ಮುಖ್ಯದ್ವಾರ ಪೂಜೆ, 19 ರಂದು ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ, 19 ರಂದು ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕಳಶ ಮೆರವಣಿಗೆ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ.
ಪೂಜೋತ್ಸವದಲ್ಲಿ ಆದಿಚುಂಚನಗಿರಿ ಮಠದ ಹಾಸನ-ಕೊಡಗು ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ಎಂ.ಎಚ್.ಅಣ್ಣೇಗೌಡ್ರು ಮಾತನಾಡಿ, ದಾನಿಗಳು, ಗ್ರಾಮಸ್ಥರ ಸಹಕಾರದಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ಗ್ರಾಮಸ್ಥರಾದ ಗುತ್ತಿಗೆದಾರ ಎಂ.ಸಿ.ಅನಿಲ್ ಮಾತನಾಡಿ, ದೇವಾಲಯದ ಇತಿಹಾಸದ ಬಗ್ಗೆ ವಿವರಿಸಿದರು. ಮೂರು ದಿನಗಳ ಪೂಜೋತ್ಸವದಲ್ಲಿ ಗ್ರಾಮಸ್ಥರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಆರ್.ಪ್ರವೀಣ್, ಖಜಾಂಚಿ ಎಂ.ವಿ.ದಾಸೇಗೌಡ, ನಿರ್ದೇಶಕ ಎಂ.ಟಿ.ರಘು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!