ಕುಶಾಲನಗರ, ನ 26:ಪಿರಿಯಾಪಟ್ಟಣ ತಾಲೂಕು ಸತ್ಯಗಾಲ ಗ್ರಾಮದ ಎಚ್.ಎನ್ ಚಂದ್ರಾಚಾರ್ ಮತ್ತು ರತ್ನಮ್ಮ ದಂಪತಿಗಳ ಪುತ್ರ, ಪುಟ್ಟರಾಜು ಸಿ
ಸಹ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಗ್ಗಡದೇವನಕೋಟೆ.
ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ. ಎನ್. ಆನಂದ ಗೌಡ ಇವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಮತ್ತು ಸವಾಲುಗಳು: ಒಂದು ಅಧ್ಯಯನ ವಿಷಯವಾಗಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿದ್ದು, ವಿಶ್ವವಿದ್ಯಾನಿಲಯವು ಮಹಾಪ್ರಬಂಧವನ್ನು ಅಂಗೀಕರಿಸಿ ಡಾಕ್ಟರೇಟ್ ಪದವಿ ನೀಡಿದೆ. ಇವರು ಈ ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ಇಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ 14 ವರ್ಷ ಕರ್ತವ್ಯ ನಿರ್ವಹಿಸಿದ್ದರು.
Back to top button
error: Content is protected !!