ಮಡಿಕೇರಿ, ನ 26 ಸುಂಟ್ಟಿಕೊಪ್ಪದಲ್ಲಿ ನಡೆದ ಕುಶಾಲನಗರ ವಲಯ ಮಟ್ಟದ ಎಸ್.ಕೆ.ಎಸ್.ಎಸ್.ಎಫ್ ಇಸ್ಲಾಮಿಕ್ ಕಲೋತ್ಸವದಲ್ಲಿ ಕೊಡ್ಲಿಪೇಟೆ ಯೂನಿಟ್ (286) ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
284 ಅಂಕಗಳೊಂದಿಗೆ ಕುಶಾಲನಗರ ದ್ವಿತೀಯ ಹಾಗೂ 251 ಅಂಕಗಳನ್ನುಗಳಿಸಿ ಮಡಿಕೇರಿ ಯೂನಿಟ್ ತೃತೀಯ ಸ್ಥಾನ ಪಡೆದುಕೊಂಡಿತ್ತು.
ಸಬ್ ಜೂನಿಯರ್ ಮತ್ತು ಸೂಪರ್ ಸೀನಿಯರ್ ವಿಭಾಗದಲ್ಲಿ ಕೊಡ್ಲಿಪೇಟೆ, ಜೂನಿಯರ್,ಜನರಲ್ ಗ್ರೂಪ್,ಮತ್ತು ಸೀನಿಯರ್ ವಿಭಾಗದಲ್ಲಿ ಕುಶಾಲನಗರ ಯೂನಿಟ್ ಪ್ರಥಮ ಸ್ಥಾನ ಪಡೆಯಿತು.
ಸಬ್ ಜೂನಿಯರ್ ವಿಭಾಗದ ಫೆಸ್ಟ್ ಐಕಾನ್ ಆಗಿ ಮೊಹಮ್ಮದ್ ಆಶಿಮ್ ಕೊಡ್ಲಿಪೇಟೆ, ಜೂನಿಯರ್ ವಿಭಾಗದಲ್ಲಿ ತಬೀಶ್ ಶನಿವಾರಸಂತೆ,ಸೀನಿಯರ್ ವಿಭಾಗದಲ್ಲಿ ಮೊಹಮ್ಮದ್ ಸಿನಾನ್ ಕುಶಾಲನಗರ, ಹಾಗೂ ಸೂಪರ್ ಸೀನಿಯರ್ ವಿಭಾಗದಲ್ಲಿ ಮೊಹಮ್ಮದ್ ರಾಜಿಕ್ ಕುಶಾಲನಗರ ಫೆಸ್ಟ್ ಐಕಾನ್ ಪ್ರಶಸ್ತಿ ಪಡೆದುಕೊಂಡರು.
ಏಳು ಯೂನಿಟ್ ಭಾಗವಹಿಸಿದ್ದ ಕುಶಾಲನಗರ ವಲಯ ಎಸ್.ಕೆ.ಎಸ್.ಎಸ್.ಎಫ್. ಇಸ್ಲಾಮಿಕ್ ಕಲೋತ್ಸವದಲ್ಲಿ ತೀರ್ಪುಗಾರರಾಗಿ ಸಮದ್ ಬಾಖವಿ ಚಿಕ್ಕಮಗಳೂರು, ಅಬ್ಬಾಸ್ ಅಝ್ಹರಿ ಸಕಲೇಶಪುರ, ರಝಾಕ್ ಫೈಝಿ ಸಕಲೇಶಪುರ, ಕಮರುದ್ದೀನ್ ಫೈಝಿ ಕುಂಜಿಲ,ಮನಾಫ್ ಅಝ್ಹರಿ ಸುಂಟ್ಟಿಕೊಪ್ಪ, ಹಾಗೂ ಸಿದ್ದೀಖ್ ಶಬಿವಾರಸಂತೆ ಕಾರ್ಯನಿರ್ವಹಿಸಿದರು.
Back to top button
error: Content is protected !!