ಕುಶಾಲನಗರ, ನ 08: ಗೋಣಿಕೊಪ್ಪದ ಕಾವೇರಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನೆಡೆದ ಜಿಲ್ಲಾಮಟ್ಟದ 14/17 ಮತ್ತು 19 ವಯೋಮಿತಿಯ , ಪ್ರಾಥಮಿಕ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಬಾಲಕ ಮತ್ತು ಬಾಲಕಿಯರ ಕರಾಟೆ ಪಂದ್ಯಾವಳಿಯನ್ನು ದಕ್ಷಿಣ ಭಾರತದ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಅರುಣ್ ಮಾಚಯ್ಯರವರ ನೇತೃತ್ವದಲ್ಲಿ ನಡೆಸಲಾಯಿತು .
ಈ ಪಂದ್ಯಾವಳಿಯಲ್ಲಿ ಕುಶಾಲನಗರದ ಸಂಕೇತ್ ನೇತೃತ್ವದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ 21 ಚಿನ್ನದ ಪದಕ ಗೆಲ್ಲುವ ಮೂಲಕ ಮುಂಬರುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ 7 ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.
ಕುಶಾಲನಗರದ ಫಾತಿಮಾ ಕಾರ್ನಮೆಂಟ್ನ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ಮುಕುಂದ್, ಮಿಥುನ್, ಕುಲದೀಪ್, ದಕ್ಷ, ದಿವಿತ್, ರಶ್ಮಿ, ಲಕ್ಷಿತ್ . ಯೂನಿಕ್ ಅಕಾಡೆಮಿ ಕೂಡ್ಲೂರು ಶಾಲೆಯ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ಇಂಪನ, ಬಿ.ಎಸ ಹಿತೇಶ್, ಕೃತಿಕ, ಪ್ರಣಿತ ನಾಯಕ್, ಹಿತೇಶ್ . ಮತ್ತು ಇತರ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್, ಮುಗಿಲ್ ವರ್ಣನ್, ರಿಷಿಕಾ, ಸಮರ್ಥ್, ವಂಶಿಕ್, ಅಲೆನ್ ತೋಮೋಸ್ ಹಾಗೂ ಕಾಲೇಜು ವಿಭಾಗದಲ್ಲಿ ಪ್ರತಿಕ್ಷ, ತೆವೀಣ್ ಕಣ್ಣನ್ ಮತ್ತು ಕೀರ್ತಿ ಕುಮಾರ್ . ಈ 21 ವಿದ್ಯಾರ್ಥಿಗಳು ಮುಂಬರುವ ದಾವಣಗೆರೆ , ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ಅಧ್ಯಕ್ಷರಾದ ಅರುಣ್ ಎನ್.ಎಸ್ .ಸಂಸ್ಥೆಯ ಉಪಾಧ್ಯಕ್ಷರಾದ ಚಂದ್ರು ಮತ್ತು ಕಾರ್ಯದರ್ಶಿ ಕಾರ್ತಿಕ್ ಮಕ್ಕಳನ್ನು ಅಭಿನಂದಿಸಿ ಮುಂಬರುವ ಪಂದ್ಯಾವಳಿಗೆ ಶುಭ ಕೋರಿರುತ್ತಾರೆ.
Back to top button
error: Content is protected !!