ಕುಶಾಲನಗರ, ಆ 26: ಸೋಮವಾರಪೇಟೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಕ್ರೀಡಾಕೂಟ ಹಾರಂಗಿ ರಸ್ತೆಯ ಮೂಕಾಂಬಿಕ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೂಕಾಂಬಿಕಾ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡೆಯ ತವರೂರು ಕೊಡಗಿನ ಹಲವು ಪ್ರತಿಭೆಗಳು ಈಗಾಗಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ವಿದ್ಯಾರ್ಥಿಗಳು ಅಂಜಿಕೆ ತೊರೆದು ಕ್ರೀಡಾಕೂಟಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕಿದೆ. ಜಿಪಂ ಅಧ್ಯಕ್ಷೆಯಾಗಿದ್ದ ಸಂದರ್ಭ ಕ್ರೀಡೆಗೆ ಹೆಚ್ಚು ಒತ್ತು ನೀಡಿ ಕೂಡಿಗೆಯಲ್ಲಿ ಕ್ರೀಡಾ ಶಾಲೆ ಸ್ಥಾಪಿಸಿದ ಬಗ್ಗೆ ಅವರು ಸ್ಮರಿಸಿಕೊಂಡರು. ಫಲಿತಾಂಶದ ನಿರೀಕ್ಷೆ, ವೈಮನಸ್ಸುಗಳನ್ನು ಬದಿಗಿಟ್ಟು ಆಟದಲ್ಲಿ ತೊಡಗಿ ಕೊಳ್ಳುವಂತೆ ಅವರು ಕರೆ ನೀಡಿದರು.
ಕೊಡಗು ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಆದಂ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 25 ಬಾಲಕರ ತಂಡ ಹಾಗೂ 16 ಬಾಲಕಿಯರ ತಂಡ ಪಾಲ್ಗೊಂಡಿದ್ದು, ಕ್ರೀಡಾಕೂಟದ ಯಶಸ್ಸಿಗೆ ಮೂಕಾಂಬಿಕಾ ವಿದ್ಯಾಸಂಸ್ಥೆ ನೀಡಿದ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಸಂಸ್ಥೆ ಪ್ರಾಂಶುಪಾಲ ಗೋಪಾಲ್ ಮಾತನಾಡಿದರು.
ಈ ಸಂದರ್ಭ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರತಾಪ್, ಉಪನ್ಯಾಸಕರಾದ ಕಾಂತರಾಜು, ದಾನಿಗಳಾದ ಬಾಷಾ, ತೀರ್ಪಗಾರರಾದ ಚೇತನ್, ಕಾರ್ತಿಕ್, ಪ್ರವೀಣ್ ಗೌಡಳ್ಳಿ,
ಸಂತೋಷ್, ಸುರೇಶ್, ದೇವಾನಂದ್, ನಿರೂಪಕ ಇಕ್ಬಾಲ್ ಮತ್ತಿತರರು ಇದ್ದರು.
Back to top button
error: Content is protected !!