ಕುಶಾಲನಗರ,ಡಿ ೧೫: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರ ಗ್ರಾಮದ ಒಳರಸ್ತೆಯಲ್ಲಿ ಕೋರೆ ಲಾರಿಗಳ ಓಡಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೋರೆ ವಾಹನಗಳನ್ನು ಊರಿನ ಒಳರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡದಂತೆ ಸುಂದರನಗರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋರೆಗಳಿಂದ ಬರುವ ಬೃಹತ್ ವಾಹನಗಳು ಊರಿನ ಒಳಭಾಗದಲ್ಲಿರುವ ಕಿರಿದಾದ ರಸ್ತೆಯಲ್ಲಿ ಸಂಚರಿಸುತ್ತಿರುವ ಹಿನ್ನಲೆ ವಿದ್ಯುತ್ ತಂತಿಗಳು ತುಂಡರಿಸಿ ಬಿದ್ದಿದೆ. ಅಲ್ಲದೇ ಲಾರಿಗಳು ಅಜಾಗರೂಕತೆಯಿಂದ ಕೋಳಿ ಹಾಗೂ ನಾಯಿಗಳು ಸತ್ತು ಬಿದ್ದಿವೆ. ರಸ್ತೆಯಲ್ಲಿ ಸಣ್ಣಪುಟ್ಟ ಮಕ್ಕಳು ಓಡಾಡುತ್ತಿರುತ್ತಾರೆ. ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೇ ಹೊಣೆ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ಆದ್ದರಿಂದ ಇದರ ಬಗ್ಗೆ ಪಂಚಾಯಿತಿ ಗಮನಹರಿಸಿ ಸುಂದರನಗರದ ಕಿರಿದಾದ ಒಳರಸ್ತೆಯಲ್ಲಿ ಕೋರೆಯ ವಾಹನಗಳು ಸಂಚರಿಸಲು ಅವಕಾಶ ನೀಡಬಾರದು ಸುಂದರನಗರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ಗ್ರಾಮಸ್ಥರ ಸಮಸ್ಯೆಯನ್ನು ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಾಹನ ಚಾಲಕರ ಅಜಾಗರೂಕತೆಯಿಂದ ರಸ್ತೆಯಲ್ಲಿ ಕೋಳಿ, ನಾಯಿ ಸತ್ತು ಬಿದ್ದಿದೆ. ನಾಳೆ ದಿನ ಇಲ್ಲಿನ ಮಕ್ಕಳಿಗೆ ಅನಾಹುತ ಸಂಭವಿಸಬಹುದಾದ ದೃಷ್ಠಿಯಿಂದ ಆದಷ್ಟು ಬೇಗನೇ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಸುಂದರನಗರ ಗ್ರಾಮಸ್ಥರು ಇದ್ದರು.
ಟಿಪ್ಪರ್ ಗಳಲ್ಲಿ ಮಣ್ಣು ಸಾಗಾಟ ಸಂದರ್ಭ ತೆರೆದ ರೀತಿಯಲ್ಲಿ ವಾಹನ ಸಂಚರಿಸುವ ಕಾರಣ ಅವಘಡ ಸಂಭವಿಸುವ ಸಾಧ್ಯತೆಯಿದ್ದು ಟಾರ್ಪಲ್ ಮುಚ್ಚಿ ಕಲ್ಲುಮಣ್ಣು ಸಾಗಿಸುವಂತೆ ಇತರೆ ಸಣ್ಣ ವಾಹನ, ಆಟೋ ಚಾಲಕರು ಆಗ್ರಹಿಸಿದ್ದಾರೆ.
Back to top button
error: Content is protected !!