ಸೋಮವಾರಪೇಟೆ, ಡಿ 14: ಅಂಗಡಿ ಮಳಿಗೆ ಹರಾಜು ವಿಚಾರದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂಬ ವಿಚಾರ ಇಂದು ಪ್ರತಿಭಟನೆಯ ಸ್ವರೂಪ ಪಡೆದು ಆಡಳಿತಾಧಿಕಾರಿಗಳೊಡನೆ ಮಾತಿನ ಚಕಮಕಿ, ಗೆರಾವ್ ಹಾಕಿ ದಿಕ್ಕಾರ ಕೂಗಿದ ಘಟನೆ ನಡೆದಿದೆ.
ಪಟ್ಟಣದ ಖಾಸಗಿ ಬಸ್ಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗದ 60 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಹರಾಜಿಗೆ ಮುಂದಾಗಿರುವ ಬಗ್ಗೆ ಅಸಮಾಧಾನಗೊಂಡ ಸದಸ್ಯರು ಹರಾಜು ಪ್ರಕ್ರಿಯೆ ಮುಂದೂಡಿ ಹಾಗೂ ಸಭೆ ಕರೆಯಿರಿ ಎಂದು ಮನವಿ ಮಾಡಿದರೂ ಸ್ಪಂದಿಸದ ಆಡಳಿತಾಧಿಕಾರಿ ತಹಶೀಲ್ದಾರ್ ಎಸ್.ಎನ್.ನರಗುಂದ ರವರ ವಿರುದ್ಧ ಇಂದು ಬೆಳಗಿನಿಂದಲೇ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು.
12 ಗಂಟೆಗೆ ಆಗಮಿಸಿದ ಆಡಳಿತಾಧಿಕಾರಿಯನ್ನು ಹಿಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯ ತಪ್ಪಾಗಿ ನಿರ್ಣಯ ಮಾಡಿದ್ದೀರಿ ನಂತರ ಎರೆಡು ಸಭೆಗಳನ್ನು ಮುಂದೂಡಿದ್ದಿರಿ ನಮ್ಮನ್ನು ಕಡೆಗಣಿಸಿ ಹರಾಜು ಕರೆದಿದ್ದಿರಿ ಆದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಿ ತಕ್ಷಣ ಸಭೆ ಕರೆಯಿರಿ ಎಂದು ತಿಳಿಸಿದರು.
ಇದಕ್ಕೆ ಆಡಳಿತಾಧಿಕಾರಿ ಪ್ರತಿಕ್ರಿಯಿಸಿ ನಾನು ಸರಿಯಾಗಿಯೆ ಮಾಡಿದ್ದೇನೆ,ಹರಾಜು ಮುಂದೂಡುವ ಪ್ರಶ್ನೆಯೇ ಇಲ್ಲ ಹಾಗೂ ಸಭೆಯ ಅವಶ್ಯಕತೆಯೂ ಇಲ್ಲಾ.ನನ್ನಿಂದ ತಪ್ಪಾಗಿದೆ ಎನ್ನುವುದಾದರೆ ಮೇಲಧಿಕಾರಿಗಳಿಗೆ ದೂರು ನೀಡಿ ಎಂದಿದ್ದು ಪ್ರತಿಭಟನಾ ಕಾರರನ್ನು ಕೆರಳಿಸಿತು ಸಂದರ್ಭ ವಾಹನವೇರಲು ಹೋರಟ ಅಧಿಕಾರಿಯ ವಾಹನಕ್ಕೆ ಅಡ್ಡನಿಂತು ಗೆರಾವ ಹಾಕಿ ದಿಕ್ಕಾರ ಕೂಗಿದರು ಈ ಸಂದರ್ಭ ಪಂಚಾಯ್ತಿ ಆವರಣದಲ್ಲಿ ಒಂದಷ್ಟು ಹೊತ್ತು ಬಿಗುವಿನ ವಾತಾವರಣ ನಿರ್ಮಾಣ ವಾಗಿತ್ತು.
ಹಿಂತಿರುಗಿ ಬಂದ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸದಸ್ಯರು ಸೆ 13ರ ಸಭೆಯಲ್ಲಿ ನಾವುಗಳು ಹರಾಜು ನಡೆಸುವಂತೆ ತಿಳಿಸಿಲ್ಲ ಆದರೆ ನೀವು ನಿರ್ಣಯ ಕೈಗೊಂಡಿದ್ದೀರಿ,ನಂತರ ಎರೆಡು ಸಭೆಗಳಲ್ಲಿ ಹರಾಜಿನ ವಿಷಯವಿಟ್ಟು ನೀವು ಬರದೆ ಸಭೆ ಮುಂದೂಡಿದ್ದು ನಮ್ಮ ಗಮನಕ್ಕೆ ಬಾರದೆ ಏಕಾಏಕಿ ಹರಾಜು ಪ್ರಕಟಣೆ ನೀಡಿದ್ದೀರಿ ಜನರಿಂದ ಆಯ್ಕೆಯಾಗಿರುವ ನಾವು ಇರುವುದು ಏತಕ್ಕೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಶಾಸಕರ ಸಮ್ಮುಖದಲ್ಲಿ ಸಭೆ ಕರೆಯಿರಿ ಎಂಬ ಒತ್ತಡಕ್ಕೆ ಮಣಿದ ಆಡಳಿತಾಧಿಕಾರಿಗಳು ಶನಿವಾರ ಸಭೆ ಕರೆಯುವುದಾಗಿ ತಿಳಿಸಿದರಾದರು ಈ ಬಗ್ಗೆ ಲಿಖಿತವಾಗಿ ನೀಡುವಂತೆ ಸದಸ್ಯರು ಪಟ್ಟು ಹಿದಿದು ಒಂದಷ್ಟು ಕಾಲ ಮಾತಿನ ಚಕಮಕಿ ನಡೆಯಿತಾದರು
ಶನಿವಾರ ಸಭೆ ನಡೆಸುವುದಾಗಿ ತಿಳಿಸಿ ಹೊರನಡೆದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಚಂದ್ರು,ಸಂಜೀವ, ಮೃತ್ಯುಂಜಯ,ಮೋಹಿನಿ,ಶೀಲಾಡಿ ಸೋಜ,ಜೀವನ್,ಮಹೇಶ್,ನಾಗರತ್ನ ಹಾಗು ಶುಭಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.
Back to top button
error: Content is protected !!