ಕುಶಾಲನಗರ, ಡಿ 14: ಕುಶಾಲನಗರ ಕಾವೇರಿ ನದಿ ತಟದ ಕುವೆಂಪು ಬಡಾವಣೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪ್ರವಾಹ ತಡೆಗಟ್ಟಲು ಕೈಗೊಂಡಿರುವ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಕಾಮಗಾರಿ ಹೆಸರಿನಲ್ಲಿ ಮರಗಳ ಹನನ ನಡೆಸಲಾಗಿದೆ ಎಂದು ಸ್ಥಳೀಯ ನಿವಾಸಿ ದೀಪಕ್ ಮತ್ತು ರಘು ಆರೋಪಿಸಿದ್ದಾರೆ.
ನದಿ ಅಂಚಿನಲ್ಲಿ ಕಾಮಗಾರಿ ನಡೆಸುವ ಬದಲು ಸಡಿಲ ಮಣ್ಣಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಹೆಸರಿನಲ್ಲಿ ಬೆಲೆಬಾಳುವ ಮರಗಳನ್ನು ಕಡಿದುರುಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ನದಿ ತಟದಲ್ಲಿದ್ದ ಪುಟ್ಟ ಪಾರ್ಕ್ ಕೂಡ ನೆಲಸಮ ಮಾಡಲಾಗಿದೆ. ದೂರದೃಷ್ಟಿಯ ಕೊರತೆಯ ಕಾಮಗಾರಿ ಇದಾಗಿದ್ದು, ತಡೆಗೋಡೆ ನಿರ್ಮಾಣಕ್ಕೆ ತನ್ನ ತೋಟ ಕೂಡ ಒಂದು ಭಾಗ ನಾಶವಾಗಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀರು ನುಗ್ಗುವ ಸ್ಥಳ ಬಿಟ್ಟು ಇತರೆಡೆ ಕಾಮಗಾರಿ ನಡೆಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
Back to top button
error: Content is protected !!