ಕ್ರೈಂ
ಪತ್ನಿಗೆ ಚಾಕುವಿನಿಂದ ಇರಿದು ಪತಿ ಆತ್ಮಹತ್ಯೆ: ಪತ್ನಿ ಆಸ್ಪತ್ರೆಗೆ ದಾಖಲು
ಕುಶಾಲನಗರ ನ 30: ಪತ್ನಿಗೆ ಚಾಕುವಿನಿಂದ ನಾನಾ ಕಡೆ ತಿವಿದು, ಕ್ರೂರ ಪತಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಆರಕ್ಷಕ ಠಾಣೆಯ ವ್ಯಾಪ್ತಿಗೆ ಒಳಪಡುವ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.
ಕಳೆದ ಒಂದುವರೆ ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಶ್ವೇತ ಹಾಗೂ ಪ್ರಸನ್ನ ಒಂದೇ ಗ್ರಾಮದವರಾಗಿದ್ದು, ಸಂಸಾರದ ಪ್ರಯಾಣದಲ್ಲಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳದೆ, ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು ಕೆಲವೇ ತಿಂಗಳಲ್ಲಿ ಪ್ರೀತಿಸಿ ವಿವಾಹವಾಗಿದ್ದ ಬಾಳಿಗೆ ಬ್ರೇಕ್ ಬಿದಿತ್ತು.
ಹಲ್ಲೆಗೆ ಒಳಗಾಗಿರುವ ಶ್ವೇತ ಹೆಚ್ಚುವರಿ ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆತ್ಮಹತ್ಯೆಗೆ ಶರಣಾದ ಪ್ರಸನ್ನ ರವರ ಮೃತ ದೇಹವನ್ನು ಕುಶಾಲನಗರದ ಶವಗಾರಕ್ಕೆ ರವಾನೆ ಮಾಡಲಾಗಿದೆ. ಶ್ಚೇತ ಕುಶಾಲನಗರದ ಟ್ರೆಂಡ್ಸ್ ನಲ್ಲಿ ಕೆಲಸ ಮಾಡುತ್ತಿದ್ದ, ಖಾಸಗಿ ಫೈನಾನ್ಸ್ ಉದ್ಯೋಗಿಯಾಗಿದ್ದ ಪ್ರಸನ್ನ ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲಿದ್ದ.
- ಘಟನೆ ನಡೆದ ಸ್ಥಳಕ್ಕೆ ಬೈಲುಕುಪ್ಪೆ ಪೊಲೀಸರು ಭೇಟಿ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುತ್ತಿದ್ದಾರೆ, ಕ್ರೈಂ ಸಬ್ ಇನ್ಸ್ಪೆಕ್ಟರ್ ಮಾಲಿಂಗಯ್ಯ, ಸಿಬ್ಬಂದಿಗಳಾದ ಮುದ್ದುರಾಜ್, ರವಿಕುಮಾರ್, ರಾಜೇಶ್ ಇದ್ದರು.