ಕುಶಾಲನಗರ, ನ 26: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಲಿ ಚೈಲ್ಡ್ ಕೇರ್ ಅಂಡ್ ಎಜುಕೇಶನ್ ಸಂಸ್ಥೆ ವತಿಯಿಂದ ಪ್ರೀ ಸ್ಕೂಲ್ ಟೀಚರ್ಸ್ ಗೆ ಉಚಿತ ತರಬೇತಿ ಶಿಬಿರ ಕುಶಾಲನಗರ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ತರಬೇತಿ ಶಿಬಿರವನ್ನು ಕೆ.ಯು.ಎಸ್.ಎಂ.ಎ.ಸಂಘಟನೆಯ (ಕರ್ನಾಟಕ ಅನ್ ಏಯ್ಡಡ್ ಸ್ಕೂಲ್ ಮೆನೇಜ್ಮೆಂಟ್ ಅಸೋಸಿಯೇಷನ್) ಅಧ್ಯಕ್ಷ ಸತ್ಯಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾಲಕಾಲಕ್ಕೆ ಶಿಕ್ಷಣ ಪದ್ದತಿಗಳಲ್ಲಿ ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಶಿಸ್ತು, ಗೌರವ, ಸಂಸ್ಕಾರಯುತ ಶಿಕ್ಷಣಕ್ಕೆ ತಳಪಾಯವಾದ ಗುರುಕುಲ ಶಿಕ್ಷಣ ಪದ್ದತಿಯನ್ನು ಹಲವು ಪಾಶ್ಚಾತ್ಯ ದೇಶಗಳು ಅಳವಡಿಕೊಳ್ಳುತ್ತಿವೆ.
ಮಕ್ಕಳನ್ನು ಗೊಂದಲದಿಂದ ಮುಕ್ತಗೊಳಿಸುವ ಸಾಮರ್ಥ್ಯ ಶಿಕ್ಷಕರಿಗೆ ಇರಬೇಕು. ಶಾಲೆಯ ವಾತಾವರಣ ಜೈಲಿನಂತಾಗಬಾರದು. ಅಂತಹ ವ್ಯವಸ್ಥೆ ಜಾರಿಗೆ ಬರಬಾರದು ಎಂಬುದೇ ನಮ್ಮ ಉದ್ದೇಶ. ಪ್ರತಿಯೊಂದು ಮಗು ತಪ್ಪು ಮಾಡದಂತೆ ಎಚ್ಚರವಹಿಸಿ ಅವರ ಭವಿಷ್ಯದ ಬಗ್ಗೆ ಯೋಚಿಸಿ ಮಾರ್ಗದರ್ಶನ ಮಾಡಬೇಕಿದೆ ಎಂದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಆದಿಲ್ ಪಾಷ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ ಶಿಕ್ಷಕರು ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಶಿಕ್ಷಣ ಇಲಾಖೆ, ಶಾಲಾ ಆಡಳಿತ ಮಂಡಳಿ ಸೇರಿದಂತೆ ಯಾವುದೇ ರೀತಿಯ ಒತ್ತಡವಿದ್ದರೂ ಸಹ ಶಿಕ್ಷಕರು ಕಾಲಹರಣಕ್ಕೆ ಒತ್ತು ನೀಡದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಮುಂದೊಂದು ದಿನ ನಿಮ್ಮಿಂದ ಕಲಿತು ಉತ್ತಮ ಸ್ಥಾನಕ್ಕೇರಿದ ವಿದ್ಯಾರ್ಥಿಗಳು ನಿಮ್ಮನ್ನು ಸದಾ ಕಾಲ ಸ್ಮರಿಸಿಕೊಳ್ಳುತ್ತಾರೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ.ಕುಶ್ವಂತ್ ಕೋಳಿಬೈಲು, ಕಿರಣ್ ಶಂಕರ್, ಸಹನಾ ಪ್ರಸಾದ್, ಶಿವಪ್ರಕಾಶ್ ಶಿಕ್ಷಕರಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಿದರು.
ಈ ಸಂದರ್ಭ ಸಂಘಟನೆಯ ರಾಜ್ಯ ಘಟಕದ ಪ್ರಮುಖರಾದ ಎಸ್.ಎಲ್.ಭಟ್, ಬಸವರಾಜು, ದೀಪಕ್, ಶಂಕರ್, ಕೊಡಗು ಜಿಲ್ಲಾ ಘಟಕ ಪ್ರಮುಖರಾದ ತಿಮ್ಮಯ್ಯ, ಪೂವಯ್ಯ ಮತ್ತಿತರರು ಇದ್ದರು.
Back to top button
error: Content is protected !!