ಗುರುವಂದನಾ ಹಾಗೂ ಸ್ನೇಹಿತರ ಸಂಗಮ ಕಾರ್ಯಕ್ರಮ
ಕೊಡ್ಲಿಪೇಟೆ :ನ.26: ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ 1993-96 ರವರೆಗೆ 8 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಂದ “ಗುರುವಂದನಾ ಹಾಗೂ ಸ್ನೇಹ ಸಂಗಮ” ಕಾರ್ಯಕ್ರಮ ದಿನಾಂಕ 25/11/2023 ರಂದು ನಡೆಯಿತು.
“ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಒಂದಿಲ್ಲೊಂದು ದಿನ ಫಲ ಕೊಟ್ಟೆ ಕೂಡುತ್ತದೆ “
ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಆಗಿನ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಐವರು ಶಿಕ್ಷಕರು, ಅವರ ಕುಟುಂಬದವರು ಪಾಲ್ಗೊಂಡು ದಿನವಿಡೀ ಹಳೆಯ ನೆನಪುಗಳನ್ನು ಮೆಲಕು ಹಾಕಿ ಸಂಭ್ರಮಿಸಿದರು.
27 ವರ್ಷಗಳ ಬಳಿಕ ದೂರದ ಊರುಗಳಿಂದ ಬಂದು ತಮ್ಮದೆ ಶಾಲೆಯಲ್ಲಿ ಎಲ್ಲರೂ ಸೇರುತ್ತಿರುವುದೇ ಒಂದು ವಿಸ್ಮಯವಾಗಿದೆ. ಅಂದು ಶಾಲೆ ಬಿಟ್ಟು ಬೇರೆ ಕಡೆ ಹೋದ ನಂತರ ಯಾರೂ ಸಂಪರ್ಕದಲ್ಲಿರಲಿಲ್ಲ. ಎಲ್ಲೆಲ್ಲೋ ಹರಿದುಹಂಚಿಹೋಗಿದ್ದೆವು. ಕಳೆದ ಒಂದು ವರ್ಷದಿಂದ ಒಬ್ಬರಿಂದೊಬ್ಬರು ಸಂಪರ್ಕಕ್ಕೆ ಬಂದು ಈಗ ಕುಟುಂಬದವರೊಂದಿಗೆ ಒಟ್ಟಾಗಿ ಸೇರಿದ್ದು ಭಾರಿ ಖುಷಿ ತಂದಿದೆ. ಬಾಲ್ಯದ ದಿನಗಳನ್ನು ನೆನೆದು ಎಲ್ಲರೂ ಭಾವುಕರಾಗಿದ್ದೇವೆ ಎಂದು ಅನೇಕರು ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಶಂಭುಲಿಂಗಪ್ಪರವರ ಅಧ್ಯಕ್ಷತೆಯಲ್ಲಿ ಮದ್ಯಾಹ್ನ ನಡೆದ ಕಾರ್ಯಕ್ರಮವು ಹಳೆ ವಿದ್ಯಾರ್ಥಿಗಳಾದ ಪೂರ್ಣಿಮಾ, ಸೀಮಾ ರವರ ಪ್ರಾರ್ಥನೆಯೊಂದಿಗೆ, ಅತಿಥಿಗಳು ಹಾಗೂ ಗುರುಗಳು ದೀಪ ಬೆಳಗುವ ಮೂಲಕ ಪ್ರಾರಂಭವಾಯಿತು, ಅಗಲಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಮನ ಸಲ್ಲಿಸಲಾಯಿತು, ಪುಟ್ಟ ಬಾಲಕಿ ‘ಗುರುಬ್ರಹ್ಮ ಗುರುವಿಷ್ಣು ‘ ಹಾಡಿಗೆ ಭಾರತನಾಟ್ಯ ಮಾಡಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು,
ಶಿಕ್ಷಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು,
ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಶಂಭುಲಿಂಗಪ್ಪನವರು, C. T. ನಾಗರಾಜರವರು ನೆರವೇರಿಸಿದರು,
ಶಶಿಯವರು ಪ್ರಾಸ್ತವಿಕ ನುಡಿಯನ್ನು, ಶಿರೀನ್ ತಾಜ್, ಅಫ್ಸರ್ ಕೊಡ್ಲಿಪೇಟೆ ಯವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ ನಾಗೇಶರವರು ವಂದನಾರ್ಪಣೆಯನ್ನು ಮತ್ತು ರೂಹಿ ಸಲ್ಮಾ ಕಾರ್ಯವನ್ನು ನಿರೂಪಿಸಿದರು.
ಶಿಕ್ಷಕ ವೃತ್ತಿ ದೇಶದ ಭವಿಷ್ಯ, ವ್ಯಕ್ತಿಯ ಭವಿಷ್ಯ ನಿರ್ಮಿಸುವ ಶ್ರೇಷ್ಠ ವೃತ್ತಿಯಾಗಿದೆ. ಈ ಸೇವೆಯನ್ನು ಸಲ್ಲಿಸಲು ಕಾರಣ ಕರ್ತರು ವಿಧ್ಯಾರ್ಥಿಗಳು ಎಂದು ಹೇಳುತ್ತಾ, ಸನ್ಮಾನಿತ ಗುರುಗಳು ತುಂಬಾ ಹರುಷದಿಂದ ಮಾತನಾಡುತ್ತಾ ವಿಧ್ಯಾರ್ಥಿಗಳು ಪಡೆದಿರುವ ಶಿಕ್ಷಣ ಸ್ವಾರ್ಥಕ್ಕೆ ಸೀಮಿತವಾಗಿ ರಬಾರದು ಅದು ಸಮಾಜಿಕ ಮತ್ತು ಕುಟುಂಬಿಕರ ಹಾಗೂ ಸರ್ವರ ಎಳ್ಗೆ ಹಾಗೂ ಅಭಿವೃದ್ಧಿ ಬಯಸುವ ಜ್ಞಾನ ವಾಗಿರಬೇಕೆಂದು ಎಂದು ಹಳೆಯ ವಿದ್ಯಾರ್ಥಿಗಳಿಗೆ ಅಂದು ಶಿಕ್ಷಕರಾಗಿದ್ದ ಪವಾರ್ ಸರ್, ಅಬ್ದುಲ್ ರಬ್, ಜಗದೀಶ್ ಬಾಬು,
ಬೆಂಬಳೂರು ಬಸಪ್ಪ ಮಾಸ್ಟ್ರು, ಅರ್ಜುಬಾನ್ ಟೀಚರ್ ಹಾಗೂ ಮಂಜುನಾಥ್ ಸರ್ ಅವರು ಹಿತವನ್ನು ನೀಡಿದ್ದು ವಿಶೇಷವಾಗಿತ್ತು.
1993-96 ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿ ಗಳಿಂದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪ್ರೌಢಶಾಲಾ ಹಾಗೂ ಜೂನಿಯರ್ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಮಾಡಲಾಯಿತು.
ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಚಂದ್ರಮೌಳಿಯವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಗೈರಾದ ಕಾರಣ ಶುಭಸಂದೇಶವನ್ನು ರವಾನಿಸಿದ್ದರು, ಸಂಸ್ಥೆಯ ನಿರ್ದೇಶಕರಾದ ಪರಮೇಶ್ ರವರು, ಸುಲೋಚನಾ ಗಿರೀಶ್ ರವರು, ಸಿ.ಟಿ ನಾಗರಾಜ್ ರವರು, ಶಿವಪ್ರಸಾದ್ ರವರು ಪಾಲ್ಗೊಂಡಿದ್ದರು.
ನವೀನ, ಸಂದೇಶ, ಶ್ರೀ ಹರ್ಷ, ಶಶಿ, ಚಿಕ್ಕವೀರಾಜ, ಪುಟ್ಟ ರಾಜು, ಅಫ್ಸರ್, ಪೂರ್ಣಿಮಾ, ಸೀಮಾ, ಶಿರೀನ್ ತಾಜ್, ಸುರಯ್ಯ ಬಾನು, ಹರೀಶ್, ಯಶವಂತ್, ಮಮತಾ, ಮಲ್ಲಿಕಾ, ಸ್ಮಿತಾ, ಕಾಮಾಕ್ಷಿ, ಪ್ರಕಾಶ ಪಾಟ್ಲೆ , ಮಧು, ನಾಗೇಶ, ಏರಿಸ್ವಾಮಿ, ರವಿ, ನಿರಂಜನ, ಮುಜೀಬ್, ಮಣಿಶಂಕರ ಮತ್ತಿತರರು ಪಾಲ್ಗೊಂಡಿದ್ದರು.