ಸಭೆ

ಬಸವನಹಳ್ಳಿ ಲ್ಯಾಂಪ್ಸ್ ಮಾಸಿಕ ಸಭೆ

ಕುಶಾಲನಗರ ನ 26: ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಮಾಸಿಕ ಸಭೆಯು ಅಧ್ಯಕ್ಷ ಎನ್. ಆರ್. ಅರುಣ್ ರಾವ್‌ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ವಿವಿಧ ವಿಷಯಗಳ ಪ್ರಸ್ತಾವನೆಗಳು ನಡೆದವು. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರುಗಳಿಗೆ ಸಹಕಾರವಾಗುವ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದವು. ಕಟ್ಟಡದ ಮೇಲ್ಚಾವಣಿ ಅಳವಡಿಕೆ, ಸಂಘಕ್ಕೆ ತಾಂತ್ರಿಕ ಪರಿಣಿತರ ನೇಮಕ ‌ಮಾಡಿಕೊಳ್ಳುವುದಯ, ಸಂಘದ ಪ್ರಗತಿಪರ ಯೋಜನೆಗೆ ಸಂಬಂಧಿಸಿದಂತೆ ವಿಷಯಗಳ ಪ್ರಸ್ತಾಪ ನಡೆಯಿತು.
ಅಧ್ಯಕ್ಷ ಎನ್. ಆರ್. ಅರುಣ್ ರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ವಿಭಾಗಿಯ ಸಹಕಾರ ಇಲಾಖೆಯ ಸಹಕಾರದೊಂದಿಗೆ ನೂತನ ಕಟ್ಟಡದ ಯೋಜನೆಗಳನ್ನು ಹಮ್ಮಿಕೊಳ್ಳುವ ವಿಷಯಗಳ ಬಗ್ಗೆ ಸಭೆಗೆ ಮಾಹಿತಿ ತಿಳಿಸಿದರು.
ಇದೇ ಸಂದರ್ಭ ನೂತನವಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡಿರುವ ಎಂ.ಎ. ರತನ್ ಕುಮಾರ್‌ ಅವರಿಗೆ ಸಂಘದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಸಂಘದ ಆಡಳಿತ ಮಂಡಳಿ‌ ಪದಾಧಿಕಾರಿಗಳು, ಮುಖ್ಯ ಕಾರ್ಯನಿವಾರ್ಹಣಾಧಿಕಾರಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!