ಕುಶಾಲನಗರ, ನ 23: ಮಾಜಿ ಶಾಸಕರ ಅವಧಿಯಲ್ಲಿ ಕೈಗೊಂಡಿದ್ದ
ಸಾರ್ವಜನಿಕರಿಗೆ ಅಗತ್ಯವಿಲ್ಲದ ಕಾಮಗಾರಿಗಳನ್ನು ಹಾಲಿ ಶಾಸಕರು ಬದಲಾವಣೆ ಮಾಡಿರುವುದು ಆಡಳಿತಾತ್ಮಕವಾದ ಪ್ರಕ್ರಿಯೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.
ಹಾಲಿ ಶಾಸಕರ ವಿರುದ್ದ ಮಾಜಿ ಶಾಸಕದ್ವರು ಸುದ್ದಿಯ ಗೋಷ್ಠಿಯಲ್ಲಿ ನಡೆಸಿದ ಕಾಮಗಾರಿಗಳ ಬದಲಾವಣೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಮಾಜಿ ಶಾಸಕ ಅಪ್ಪಚ್ಚುರಂಜನ್ ತಮ್ಮ ಹಿಂಬಾಲಕರ ಅನುಕೂಲದ ದೃಷ್ಟಿಯಿಂದ ಕೆಲವು ಕಾಮಗಾರಿಗಳನ್ನು ಕೈಗೊಂಡಿದ್ದರು. ಸಾರ್ವಜನಿಕವಾಗಿ ಉಪಯೋಗವಿಲ್ಲದ ಇಂತಹ ಕೆಲವು ಕಾಮಗಾರಿಗಳನ್ನು ಕೈಬಿಡಲಾಗಿದ್ದು ಕೆಲವನ್ನು ಮರು ಅಂದಾಜಿಗೆ ಒಳಪಡಿಸಲಾಗಿದೆ.
ಬಿಜೆಪಿ ಕೂಡ ತನ್ನ ಅಧಿಕಾರಾವಧಿಯಲ್ಲಿ ಕಾಮಗಾರಿಗಳನ್ನು ಬದಲಿಸುವ ಕಾರ್ಯ ನಡೆಸಿದೆ. ಸುಖಾಸುಮ್ಮನೆ ಕಾನೂನು ಹೋರಾಟ ನಡೆಸುವ ಹೇಳಿಕೆ ಬಾಲಿಷವಾದದು ಎಂದರು.
ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರು ಕ್ಷಿಪ್ರಗತಿಯಲ್ಲಿ ತಮ್ಮ ಕ್ಷೇತ್ರದಾದ್ಯಂತ ಸಂಚರಿಸಿ ಮಾಹಿತಿ ಕಲೆಹಾಕಿದ್ದು ಅದರಂತೆ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದಾರೆ. ಮಾಜಿ ಶಾಸಕ ಅಪ್ಪಚ್ಚುರಂಜನ್ ಅವಧಿಯಲ್ಲಿ ಆರಂಭವಾದ ಕಾಮಗಾರಿಗಳು ಹಲವು ಅಪೂರ್ಣವಾಗಿದ್ದು ಅಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೂಡ ಕ್ರಮವಹಿಸಿದ್ದಾರೆ. ಆದರೆ ಸೋಲನ್ನು ಅರಗಿಸಿಕೊಳ್ಳಲಾಗದೆ ಹತಾಶೆ, ಖಿನ್ನತೆಯಿಂದ ವಿನಾಕಾರಣ ಬಡಬಡಿಸುವ ಮೂಲಕ ತಮ್ಮ ಅಸಮರ್ಥತೆ, ಕಾರ್ಯಕ್ಷಮತೆ ಕೊರತೆಯನ್ನು ಬೆತ್ತಲಾಗಿಸಿದ್ದಾರೆ. ಸುಮ್ಮನಿದ್ದರೆ ಅವರ ಗೌರವ ಹೆಚ್ಚುತ್ತದೆ ಎಂದರು.
ಪ್ರವಾಹ ಪೀಡಿತ ಬಡಾವಣೆಗಳಲ್ಲಿ ಕೈಗೊಳ್ಳಬೇಕಾದ ತಡೆಗೋಡೆ ಕಾಮಗಾರಿಗಳು ಅವೈಜ್ಞಾನಿಕವಾಗಿ ರೂಪಿಸಿದ್ದು ಇಂದಿನ ಶಾಸಕರು ಅದನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ಯೋಜನೆ ರೂಪಿಸಿದ್ದಾರೆ. ಯಾರದೋ ಹೋರಾಟ, ಮತ್ತಾರದ್ದೋ ಕೊಡುಗೆಗಳನ್ನು ಅಂಜಿಕೆಯಿಲ್ಲದೆ ತಮ್ಮ ಸಾಧನೆ ಎಂದು ಅಪ್ಪಚ್ಚುರಂಜನ್ ಬಿಂಬಿಸಿಕೊಂಡಿದ್ದಾರೆ. ಇದಕ್ಕೆ ಕಾವೇರಿ ತಾಲೂಕು ಹೋರಾಟವೇ ಸಾಕ್ಷಿ. ತಮ್ಮ ಅವಧಿಯಲ್ಲಿ ಆರಂಭವಾದ ಕಲಾಭವನ, ಯುಜಿಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಳಪೆ ವಿನ್ಯಾಸದಿಂದ ಪುರಸಭೆ ನೂತನ ವಾಣಿಜ್ಯ ಸಂಕೀರ್ಣ ಕಾಮಗಾರಿ ವ್ಯರ್ಥವಾಗಿದೆ, ತಮ್ಮ ಸ್ವಂತ ಊರಾದ ಮಾದಾಪುರವನ್ನು ಹೋಬಳಿಯಾಗಿಸಲು, ಬಸವನಹಳ್ಳಿ ಯಲ್ಲಿ ಸಾರಿಗೆ ಬಸ್ ಡಿಪೋ ಸ್ಥಾಪಿಸಲು ಅವರಿಂದ ಸಾಧ್ಯವಾಗಿಲ್ಲ. ಎನ್ ಎಚ್ ನಿರ್ಮಾಣ ಸಂದರ್ಭ ಎರಡೂ ಬದಿ ಎರಡು ಮೀಟರ್ ಅಗಲ ಕಡಿತಗೊಳಿಸಿ ಕುಶಾಲನಗರದ ಸೌಂದರ್ಯ ಕ್ಕೆ ಧಕ್ಕೆ ತಂದಿದ್ದಾರೆ. ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ವಿನ್ಯಾಸ ನಗೆಪಾಟಲಿಯಾಗಿದೆ. ಇವೆಲ್ಲವೂ ಅವರ ದೂರದೃಷ್ಠಿ ಕೊರತೆ ಎತ್ತಿ ತೋರಿಸುತ್ತಿದೆ. ಅವರ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದೇ ಒಳ್ಳಯದಾಗಿದೆ. ಅವರ ಅವಧಿಯಲ್ಲಿ ಪೂರ್ಣಗೊಂಡಿದ್ದರೆ ಎಲ್ಲವೂ ಕಳೆಪೆಯಾಗುತ್ತಿತ್ತು. ಅವುಗಳನ್ನು ನಮ್ಮ ಅವಧಿಯಲ್ಲಿ ಯಾವುದೇ ರಾಜಿಯಿಲ್ಲದೆ ಅತ್ಯಂತ ಗುಣಮಟ್ಟದಿಂದ ಪೂರ್ಣಗೊಳಿಸಲು ಬದ್ದರಾಗಿದ್ದೇವೆ ಎಂದರು.
ಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಕೆ.ಇ.ಚಂದ್ರಕಲಾ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ಎಂ.ಕೆ.ದಿನೇಶ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ರೋಷನ್ ಇದ್ದರು.
Back to top button
error: Content is protected !!