ಕುಶಾಲನಗರ, ನ 21: ಕರ್ನಾಟಕ ಚಾಲಕರ ಒಕ್ಕೂಟದ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ
ಒಕ್ಕೂಟದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷ ಜಿ.ನಾರಾಯಣ ಸ್ವಾಮಿ ಕೊಡಗು-ಮೈಸೂರು ಗಡಿಯಲ್ಲಿರುವ
ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮೆರವಣಿಗೆ ಮೂಲಕ ರಾಜ್ಯ ಘಟಕದ ಪ್ರಮುಖರನ್ನು ಒಕ್ಕೂಟದ ಕೊಡಗು ಪದಾಧಿಕಾರಿಗಳು ಮೆರವಣಿಗೆ ಮೂಲಕ ಕರೆತಂದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ನಾರಾಯಣ ಸ್ವಾಮಿ, ಚಾಲಕ ವರ್ಗ ಸದಾ ಕನ್ನಡ ಹಾಗೂ ಕನ್ನಡಾಂಭೆಯ ರಕ್ಷಣೆಗೆ ಬದ್ದರಾಗಿದ್ದಾರೆ. ಯಾವುದೇ ರೀತಿಯ ಹೋರಾಟ ನಡೆದರೂ ಅಲ್ಲಿ ಚಾಲಕರ ಪಾಲ್ಗೊಳ್ಳುವಿಕೆ ಇಲ್ಲದಿದ್ದಲ್ಲಿ ಅದು ಯಶಸ್ವಿಯಾಗುವುದಿಲ್ಲ. ಇತರೆ ಭಾಷೆಗಳ ಹಾವಳಿ ನಡುವೆ ಕನ್ನಡ ಕಣ್ಮರೆಯಾಗಬಾರದು. ಇತರೆ ಭಾಷೆಯ ಜ್ಞಾನವಿದ್ದರೂ ಕೂಡ ಕನ್ನಡ ಕಲಿಸಿ ನಂತರ ಅವರ ಭಾಷೆ ಬಳಕೆಗೆ ಎಲ್ಲರೂ ಆದ್ಯತೆ ನೀಡುವಂತಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ಮಾಜಿ ಸೈನಿಕರಾದ ಅಬ್ದುಲ್ ರಜಾಕ್, ಎಂ.ಕೆ.ತಮ್ಮಯ್ಯ, ಅಲ್ಬರ್ಟ್ ಗೋಶಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ಗುರುಮೂರ್ತಿ, ಎಂ.ಡಿ.ಮಸ್ತಾನ್, ರಾಜ್ಯ ಸಂಚಾಲಕ ಕೃಷ್ಣರಾಜು ಅರಸು, ಅರವಿಂದ ದಕ್ಷ, ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ, ಬೆಂಗಳೂರು ನಗರಾಧ್ಯಕ್ಷ ನಾಗರಾಜ್ ಗೌಡ, ಉತ್ತರಹಳ್ಳಿ ಅಧ್ಯಕ್ಷ ರುದ್ರೇಶ್, ರಾಜ್ಯ ಆಟೋ ಘಟಕ ಪ್ರಮುಖ ಸಿದ್ದರಾಜು, ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಸಯ್ಯದ್ ಮುಜೀಬ್, ಉಪಾಧ್ಯಕ್ಷ ಕೆ.ಚಂದ್ರು, ಗೌರವ ಸಲಹೆಗಾರರಾದ ನಾಸಿರ್, ಫಯಾಜ್, ಕೆ.ಆರ್.ನಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ರಿಯಾಜ್, ಕುಶಾಲನಗರ ತಾಲೂಕು ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮನುಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎ.ಸನಾವುಲ್ಲಾ ಖಾನ್ ಮತ್ತಿತರರು ಇದ್ದರು.
ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಸಕ ಡಾ.ಮಂಥರ್ ಗೌಡ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
Back to top button
error: Content is protected !!