ಕಾರ್ಯಕ್ರಮ

ಹೆಬ್ಬಾಲೆಯಲ್ಲಿ ನಡೆದ ಅಂತರ್ ಪ್ರೌಢಶಾಲೆ, ಕಾಲೇಜುಗಳ ಭಾಷಣ, ಪ್ರಬಂಧ ಸ್ಪರ್ಧೆ.

ಕುಶಾಲನಗರ ನ.11: ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘ ಇವರ ವತಿಯಿಂದ ಅಂತರ್ ಪ್ರೌಢಶಾಲಾ, ಮತ್ತು ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳು ಹೆಬ್ಬಾಲೆಯ ಸಂಯುಕ್ತ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮೈಸೂರಿನ ಉದ್ಯಮಿ ಹೆಚ್. ಕೆ. ಪ್ರಸನ್ನ ನೆರವೇರಿಸಿ ನಂತರ ಮಾತಾಡುತ್ತಾ ವಿದ್ಯಾರ್ಥಿಗಳಲ್ಲಿ ತನ್ನದೇಯಾದ ಕೌಶಲ್ಯ, ಮತ್ತು ಬುದ್ಧಿ ಶಕ್ತಿಯನ್ನು ಹೊಂದಿದ್ದು,ಅಂತಹ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದರು.
ಅತಿಥಿಗಳಾಗಿ ಅಗಮಿಸಲಿದ್ದ ಕಾವೇರಿ ನದಿ ಸ್ವಚ್ಚತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತಾಡುತ್ತಾ ನದಿ ಸಂರಕ್ಷಣೆ, ಸ್ವಚ್ಚತೆ, ಗಿಡಮರಗಳನ್ನು ಉಳಿಸಿಬೆಳೆಸುವುದರಿಂದಾಗುವ ಪ್ರಯೋಜನದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತಾಡುತ್ತಾ ಭಾಷಣ, ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಲು, ಮತ್ತು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಬರವಣಿಗೆ ಸಹಕಾರ, ಅಲ್ಲದೆ ವೇದಿಕೆಯಲ್ಲಿ ಧೈರ್ಯದಿಂದ ತನ್ನ ವಾಕ ಚಾತೂಯ್ಯ ವನ್ನು ಎದುರಿಸಲು ಇತಂಹ ಕಾರ್ಯಕ್ರಮಗಳು ಅನುಕೂಲವಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆ.ವಿ. ಶಿವಪ್ಪ ವಹಿಸಿದರು. ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್. ಎಲ್. ರಮೇಶ್, ಕಣಿವೆಯ ಸಾಹಿತಿ ಭಾರಧ್ವಜ ಆನಂದತೀರ್ಥ, ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ .ಎನ್. ಮೂರ್ತಿ, ಯತೀಶ್, ನಿವೃತ್ತ ಶಿಕ್ಷಕರಾದ ಹೆಚ್.ಎನ್ ಲೋಕೇಶ್, ಜಯಮ್ಮ, ಟಿ.ಜಿ.ಗಿರೀಶ್, ಎಂ.ಕೆ. ವಿಜಯಕುಮಾರ್, ಬಸವರಾಜಶೆಟ್ಟೆ
, ಉಮೇಶ್, ಹಿರಿಯ ವಿದ್ಯಾರ್ಥಿ ಮಮತ, ದಿನೇಶಾಚಾರಿ, ಕನ್ನಡ ಅಧ್ಯಾಪಕ ವೆಂಕಟನಾಯಕ್, ಹಿಂದಿ ಭಾಷಾ ಶಿಕ್ಷಕಿ, ಡಿ.ಕವಿತ, ಎ.ಆರ್. ಯೋಗೇಶ್ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತೊರೆನೂರು ಶಾಲೆ ನಂದಿತ, ದ್ವಿತೀಯ ಸ್ದಾನ ನವೀತಾ,ದರ್ಶನ್.
ಭಾಷಣ ಸ್ಪರ್ಧೆಯಲ್ಲಿ ಕೂಡಿಗೆ ಮೊರಾರ್ಜಿ ದೇಸಾಯಿ ಶಾಲೆಯ ಗಾನವಿ,ಪ್ರಥಮ. ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ಗೌತಮಿ ದ್ವಿತೀಯ.
ಕಾಲೇಜು ವಿಭಾಗದಲ್ಲಿ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಟಿ. ಜಿ. ಪಲ್ಲವಿ, ಪ್ರಥಮ ಶಿರಂಗಾಲದ ಎಸ್. ಆರ್. ರಕ್ಷಿತಾ. ದ್ವೀತಿಯ, ಭಾಷಣ ಸ್ಪರ್ಧೆಯಲ್ಲಿ ಹೆಬ್ಬಾಲೆ ಪದವಿಪೂರ್ವ ಕಾಲೇಜಿನ ಭೂಮಿಕ,ಪ್ರಥಮ, ಸಂಗೀತ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು ಬಹುಮಾನ ವಿತರಣೆಯನ್ನು ವೇದಿಕೆಯಲ್ಲಿದ್ದ ಅತಿಥಿಗಳು ವಿತರಣೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!