ಕುಶಾಲನಗರ, ನ 08: ಕೂಡಿಗೆ ಸಮೀಪದ ಜೇನುಕಲ್ಲು ಬೆಟ್ಟದ ನಿವಾಸಿ ಜವರೇಗೌಡ ಎಂಬುವರ ಮಗ ಕೆಂಚೇಗೌಡ ನಿಮ್ಮೂರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ವಿದ್ಯುತ್ ಸಂಪರ್ಕ ಕಲ್ಪಿಸುವ ಭರದಲ್ಲಿ ಚೆಸ್ಕಾಂ ಅಧಿಕಾರಿಗಳು ನಮ್ಮ ಜಮೀನಿನ ಮರಗಳ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗುವಂತೆ ವಿದ್ಯುತ್ ಲೈನ್ ಅಳವಡಿಸುತ್ತಾರೆ. ಇಂತಹ ಅಳವಡಕೆಯಿಂದ ಮುಂದೆ ಜೀವ ಹಾನಿ ಆಗಬಹುದು ಎಂಬ ಉದ್ದೇಶದಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಸಂಪರ್ಕಕ್ಕೆ ಮುಂದಾಗಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಧಿಕಾರಿಗಳು ಯಾವುದೂ ಆಮಿಷಕ್ಕೆ ಒಳಗಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜವರೇಗೌಡರ ಕುಟುಂಬದ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Back to top button
error: Content is protected !!