ಕುಶಾಲನಗರ, ಅ 30: ಕುಶಾಲನಗರದ ಐತಿಹಾಸಿಕ ಶ್ರೀ ಮಹಾಗಣಪತಿ ರಥೋತ್ಸವ ಡಿಸೆಂಬರ್ 01 ರಂದು ನಡೆಯಲಿದೆ.
ನವೆಂಬರ್ 4 ರಂದು ನಡೆಯುವ ಸಮಿತಿಯ ಮಹಾಸಭೆಯಲ್ಲಿ ದಿನಾಂಕ ಅಧಿಕೃತ ಘೋಷಣೆ ಮಾಡಲಾಗುವುದು. ನ.30 ಹಾಗೂ ಡಿ.01 ಈ ಎರಡು ದಿನಗಳ ಪೈಕಿ ಬಹುತೇಕ ಡಿ.01 ರಂದು ಜಾತ್ರೋತ್ಸವಕ್ಕೆ ದಿನ ನಿಗದಿಯಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.