ಸಭೆ

ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮ ಸಾಗುವಳಿಗೆ ಆಕ್ರೋಶ: ಕಾನೂನು ಕ್ರಮದ ಎಚ್ಚರಿಕೆ

ಬೃಹನ್ಮಠದ ಆಡಳಿತಾಧಿಕಾರಿಗಳು ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಾದ ರೇಖಾ ಅವರಿಂದ ಎಚ್ಚರಿಕರ

ಸೋಮವಾರಪೇಟೆ, ಅ 30: ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮ ಸಾಗುವಳಿ ಮಾಡುತ್ತಿರುವವರು ಭೂಮಿಯನ್ನು ಮಠಕ್ಕೆ ಹಿಂದಿರುಗಿಸಿ,ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿಗಳು ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಾದ ರೇಖಾರವರು ಎಚ್ಚರಿಸಿದ್ದಾರೆ.

ಸೋಮವಾರಪೇಟೆ ಸಮೀಪದ ಬೇಳೂರು ಗ್ರಾಮದಲ್ಲಿ ಚಿತ್ರದುರ್ಗ ಬೃಹನ್ಮಠಕ್ಕೆ ಸೇರಿದ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಮಠ ಹಾಗೂ ಮಠಕ್ಕೆ ಸಂಬಂಧಿಸಿದ ಆಸ್ತಿಯ ಕುಂದುಕೊರತೆ ಹಾಗೂ ಅಭಿವೃದ್ದಿಗೆ ಸಂಬಂಧಿಸಿಂತೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಹಿಂದೆ ಕೊಡಗಿನ ಅರಸರು ಮಠಕ್ಕೆ ನೀಡಿರುವ ಆಸ್ತಿ. ಅದು ಸಾರ್ವಜನಿಕ ಆಸ್ತಿ ಅದನ್ನು ಯಾರ ವೈಯುಕ್ತಿಕ ಸೋತ್ತಾಗಲು ಸಾಧ್ಯವಿಲ್ಲವೆಂದು ತಿಳಿಸಿದರು.
ಬೃಹನ್ಮಠದ ಆಸ್ತಿಯನ್ನು ಸಂರಕ್ಷಿಸಲು ಹಾಗೂ ಕಾನೂನು ಹೋರಾಟ ನಡೆಸಲು ಹಿರಿಯ ಹಾಗೂ ಅನುಭವಿ ವಕೀಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.
ಮಠದ ಆಸ್ತಿ ಪ್ರಸ್ತುತ ಪರಿಸ್ತಿಗೆ ಸಂಬಂಧಿಸಿದಂತೆ ಕೆಂಪು,ಹಳದಿ ಹಾಗೂ ಹಸಿರು ವಲಯಗಳನ್ನಾಗಿ ವಿಭಜಿಸಿ ಕಾನೂನು ಘಟಕ ಕ್ರಮಕೈಗೊಳ್ಳಲು ಸಿದ್ದವಾಗಿದೆ. ಆದ್ದರಿಂದ ಅಕ್ರಮವಾಗಿ ಮಠದ ಆಸ್ತಿಯನ್ನು ಬಳಸಿ ಕೊಳ್ಳುತಿರುವವರು ನೀವಾಗಿಯೇ ಹಿಂತಿರುಗಿಸಿದರೆ ಒಳ್ಳೆಯದು ಎಂದು ತಿಳಿಸಿದರು.
ಮಠದ ಆಸ್ತಿ, ಮರಗಳ ಹನನ ಸೇರಿದಂತೆ ಇನ್ನಿತರೆ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಮಠಗಳು ದಾಸೋಹಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲಿ ಅದಾವುದೂ ನಡೆಯುತ್ತಿಲ್ಲ. ಆದ್ದರಿಂದ ನಾಳೆಯಿಂದಲೇ ಬೇಳೂರು ಮಠದಲ್ಲಿ ದಾಸೋಹ ಆರಂಭಿಸಲು ಸಂಬಂಧಿಸಿದವರಿಗೆ ಆದೇಶಿಸಿದರು.
ಬೇಳೂರು ಮಠ,ಅಭಿಮಠ,ಗುತ್ತಿ ಮಠ,ಸೋಮವಾರಪೇಟೆ ವಿರಕ್ತ ಮಠ,ಗುತ್ತಿ ಮಠ ಹಾಗೂ ಚಂಗದ ಹಳ್ಳಿ ಮಠಗಳ ಅಭಿವೃದ್ಧಿಯೊಂದಿಗೆ ಎಲ್ಲಾ ಮಠಗಳಿಗೂ ಸ್ವಾಮೀಜಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಭಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ತಾಲೂಕು ಅಧ್ಯಕ್ಷ ಹಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ,ಗ್ರಾಮಸ್ಥ ಪ್ರಜ್ವಲ್,ವೀರಶೈವ ಮುಖಂಡರುಗಳಾದ ಶಾಂತ್ವೇರಿ ವಸಂತ್, ಚಂಗಡಹಳ್ಳಿಯ ಹಾಲಪ್ಪ, ಸಂತೋಷ್ ಕೊಡ್ಲಿಪೇಟೆ ನಿರ್ಮಲ ನಾಗರಾಜ್ ರವರುಗಳು ಮಾತನಾಡಿ, ಕೊಡಗಿನ ಅರಸರು ಸುಮಾರು 3000 ಏಕರೆಗಳಿಗಿಂತ ಹೆಚ್ಚಿನ ಭೂಮಿಯನ್ನು ಮುರುಘಾ ಮಠಕೆ ನೀಡಿದ್ದಾರೆಂದು ಹೇಳಲಾಗಿದೆ ಆದರೆ ಪ್ರಸ್ತುತ 550 ಎಕರೆಗೆ ಬಂದು ನಿಂತಿದೆ. ಆದರೆ ಉಳಿದ ಭೂಮಿ ಎಲ್ಲಿಗೆ ಹೋಯಿತು. ಇಂದು ಬಹುತೇಕ ಭೂಮಿ ಅಕ್ರಮವಾಗಿ ಬಳಕೆಯಾಗುತ್ತಿದೆ ಅವುಗಳನ್ನು ವಾಪಸ್ ಪಡೆಯಬೇಕು ಅದು ಸಮಾಜದ ಆಸ್ತಿಯಾಗಿ ಉಳಿಯಬೇಕೆಂದು ಹೇಳಿದರು.ಈ ಹಿಂದೆ  ವ್ಯವಸ್ಥಾಪಕರಾಗಿದ್ದವರ ಸಂದರ್ಭ ಮಠದ ಹೆಸರಿನಲ್ಲಿದ್ದ ಜಮೀನಿಗೆ ಸುತ್ತಾ ಬೇಲಿಹಾಕಿ ತೋಟ ಮಾಡಿದ್ದರು. ಆದರೆ ಇಂದು ಕೆಲವು ಜಾಗ ಪಾಳುಬಿದ್ದು ಕಾದಾಗಿದ್ದರೆ,ಮತ್ತೆ ಕೆಲವು ಅನ್ಯರ ಪಾಲಾಗಿದೆ ಎಂದು ಆರೋಪಿಸಿದರು.
ತೋಟದ ಒಳಗೆ ಇದ್ದ ಮರಗಳನ್ನು ಕಡಿದು ಮಾರಲಾಗಿದೆ ಇದರ ಹಣ ಮಠಕ್ಕೆ ಸೇರಿದೆಯೇ ಎಂದು ಪ್ರಶ್ನಿಸಿದರು. 200 ಎಕರೆ ತೋಟವನ್ನು ಹೊರರಾಜ್ಯದ ವ್ಯಕ್ತಿಗಳಿಗೆ ಅತ್ಯಂತ ಕಡಿಮೆ ಹಣಕ್ಕೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಇದು ಹೆಸರಿಗಷ್ಟೇ ಮಠ ಇಲ್ಲಿ ಹಸಿದು ಬರುವವರಿಗೆ ಅನ್ನಹಾಕಲಾರದಷ್ಟು ಹಾಳು ಬಿದ್ದಿದೆ. ಇಲ್ಲಿನ ಮಠ ಗಳಿಗೆ ಸ್ವಾಮೀಜಿಗಳು ಇಲ್ಲದೆ ಧಾರ್ಮಿಕ ಚಟುವಟಿಕೆಗಳು ನಡೆಯದೆ ಪಾಳು ಬಿದ್ದಿವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತಾಧಿಕಾರಿಗಳು  ನಿಮ್ಮೆಲ್ಲಾ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಬೃಹನ್ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಕುಮಾರ್,ಮಾನವ ಸಂಪನ್ಮೂಲ ಅಧಿಕಾರಶ ವಿಜಯ, ಕಾನೂನು ಸಲಹೆಗಾರ ಹಿರಿಯ ವಕೀಲ ವಿಶ್ವನಾಥ,ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ವೇದಿಕೆಯಲ್ಲಿದ್ದರು.
ಬೇಳೂರು,ಶನಿವಾರಸಂತೆ, ಕೊಡ್ಲಿಪೇಟೆ, ಚಂಗಡ ಹಳ್ಳಿ ಸುತ್ತಮುತ್ತಲ ಕೆಲವು ಗ್ರಾಮಸ್ಥರು ಮತ್ತು ವೀರಶೈವ ಮುಖಂಡರು ಹಾಜರಿದ್ದ ಸಂದರ್ಭ ಮಠದ ಆವರಣದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದಬಸ್ತ್ ಒದಗಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!