ಕುಶಾಲನಗರ, ಅ 29:
ದಲಿತರ ಅಭಿವೃದ್ಧಿಗೆ ಮೀಸಲಿಡುವ ಸರ್ಕಾರದ ಯೋಜನೆಗಳು ಮಾಹಿತಿ ಕೊರತೆಯಿಂದ ಸದ್ಬಳಕೆಯಾಗದಿರುವುದು ನಿಜವಾಗಿಯೂ ದುರದೃಷ್ಟಕರ ಎಂದು ಡಿವೈಎಸ್ಪಿ ಗಂಗಾಧರಪ್ಪ ತಿಳಿಸಿದರು. ಕುಶಾಲನಗರ ಪೊಲೀಸ್ ಠಾಣಾ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರು ತಮ್ಮ ವೈಯಕ್ತಿಕ ದ್ವೇಷಗಳನ್ನು ಬದಿಗಿರಿಸಿ ಜನಾಂಗದ ಅಭಿವೃದ್ಧಿಗೆ ಪಣ ತೊಡಬೇಕು. ಸರ್ಕಾರ ನೀಡುವ ಸಾಲ ಸೌಲಭ್ಯ ಹಾಗೂ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನಿಂದ ಶ್ರಮಿಸಬೇಕು. ಮುಂದೆ ದಲಿತರ ಪ್ರತಿ ಕಾಲೋನಿಗಳಲ್ಲಿ ಗ್ರಾಮಸಂಪರ್ಕ ಸಭೆಯನ್ನು ಕರೆದು ದಲಿತರ ಕುಂದು ಕೊರತೆಗಳನ್ನು ನೀಗಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದ ಅವರು, ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭ ವೃತ್ತ ನಿರೀಕ್ಷಕ ಪ್ರಕಾಶ್, ನಗರ ಠಾಣಾಧಿಕಾರಿಗಳಾದ ಚಂದ್ರಶೇಖರ್, ಎಚ್. ಟಿ. ಗೀತಾ, ದಲಿತ ಸಂಘರ್ಷ ಸಮಿತಿಯ ಎಚ್.ಪಿ. ಶಿವಕುಮಾರ್, ಕೆ. ಬಿ.ರಾಜು. ಪ್ರಮುಖರಾದ ಎಚ್.ಟಿ.ವಸಂತ್, ಲೋಕೇಶ್, ಸತೀಶ್, ಸುರೇಶ್, ಟಿ.ಆರ್. ಸತೀಶ್, ರಾಜು ಮತ್ತಿತರರು ಹಾಜರಿದ್ದರು.
Back to top button
error: Content is protected !!