ಕುಶಾಲನಗರ ಅ 28: ಮಹರ್ಷಿ ವಾಲ್ಮಿಕಿ ಅವರ ಬದುಕಿನ ಚಿತ್ರಣ ಎಲ್ಲರ ಜೀವನದಲ್ಲೂ ಮತ್ತು ಮನಸ್ಸಿನಲ್ಲೂ ಹೊಸದಾದ ಪರಿವರ್ತನೆಯಾಗಲಿದೆ ಎಂದು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಸಹಾಯಕ ಪ್ರಾದ್ಯಾಪಕ ರಮೇಶ್ ಚಂದ್ರ ಹೇಳಿದರು.
ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ವಾಲ್ಮಿಕಿ ರಚಿಸಿದ ರಾಮಾಯಣದಲ್ಲಿ ಮಾನವ ಜೀವನದ ಮಾನಸಿಕತೆಯನ್ನೇ ಬದಲಾಯಿಸುತ್ತದೆ ಜನರಲ್ಲಿ ಮಾತೃ ಪ್ರೀತಿ, ಸಹೋದರತ್ವ ಬಾಂಧವ್ಯ ಹಾಗೂ ಇನ್ನೀತರ ಜೀವನ ಮೌಲ್ಯಗಗಳು ನಮ್ಮಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸುತ್ತದೆ.ಆ ನಿಟ್ಟಿನಲ್ಲಿ ಎಲ್ಲರೂ ರಾಮಾಯಣವನ್ನು ಓದಲೇ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು.
ಕಾರ್ಯಕ್ರಮದ ಮೊದಲು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆಪುಷ್ಪರ್ಚನೆ ಮಾಡಲಾಯಿತು.
ಸಹ ಪ್ರಾಧ್ಯಪಕರುಗಳಾದ ಸುನಿಲ್, ಸುಧಾಕರ್, ವಂದನ, ಕುಸುಮ, ರಶ್ಮಿ, ಉಪನ್ಯಾಸಕರುಗಳಾದ ಮನೋಜ್ ಚರಣ್ ರಾಜ್, ಪುನಿತ್ ಸೇರಿದಂತೆ ಕಚೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Back to top button
error: Content is protected !!