ಕುಶಾಲನಗರ, ಅ 19: ಭಾಷೆ ಮುಖ್ಯವಲ್ಲ ಅದನ್ನು ಬಳಸುವ ಪದ ಆರೋಗ್ಯವಾಗಿರಬೇಕು ಎಂದು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹರ್ಷ ಬಿ.ಡಿ. ಹೇಳಿದು.
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ಮತ್ತು ರೇಂಜರ್ ಘಟಕಗಳ ವತಿಯಿಂದ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಜೀವನ ಕೌಶಲ್ಯಗಳು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಒತ್ತಡ ಹಾಗೂ ಅಹಂ ಇರಬಾರದು, ಆಹಂ ಇದ್ದಲ್ಲಿ ವ್ಯಕ್ತಿ ಯ ಭಾವನೆಗೆ ಧಕ್ಕೆ ಬರಲಿದೆ. ಅಲ್ಲದೇ ಶಿಸ್ತು, ಸಮಯಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮ ಜೀವನ ಶೈಲಿ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ವರ್ತಿಸಿ ಬಾಂಧವ್ಯ ವೃದ್ಧಿಸಿಕೊಳ್ಳಬೇಕು. ಸ್ನೇಹಿತರೊಂದಿಗೆ ಬೆರೆತರೆ ಮಾತ್ರ ತಮ್ಮಲ್ಲಿ ಕೌಶಲ್ಯ ಹೆಚ್ಚಾಗಿ ಕೆಟ್ಟತನ ಕಡಿಮೆಗೊಳ್ಳಲಿದೆ. ಎಲ್ಲ ವಿದ್ಯಾರ್ಥಿಗಳು ಇನ್ನೊಬ್ಬರನ್ನು ಹತ್ತಿರಕ್ಕೆ ಸೆಳೆಯುವ ಕೌಶಲ್ಯ ಎಲ್ಲರಲ್ಲೂ ಇರಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಮಹಾಲಕ್ಷ್ಮೀ ಜೆ.ಎಸ್. ತರಬೇತಿ ಸಂಚಾಲಕರು ಜೀವನ ಕೌಶಲ ತಂಡ, ನಿಮ್ಹಾನ್ಸ್ ಬೆಂಗಳೂರು ಇವರು ಆಗಮಿಸಿದ್ದರು.
ಸಹಾಯಕ ಪ್ರಾಧ್ಯಾಪಕ ಸುಧಾಕರ್ ಟಿ.ಎಂ, ಕ್ರೀಡಾ ಸಂಚಾಲಕಿ ಜಯಂತಿ ಪಿ, ಆಂತರಿಕ ಭರವಸಾ ಕೋಶದ ಸಂಚಾಲಕಿ ಡಾ.ರಶ್ಮಿ ಎಂ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು. 300 ವಿದ್ಯಾರ್ಥಿಗಳಿಗೆ ಕಾರ್ಯಕ್ರಮವನ್ನು ತಲುಪಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಕಾರ್ಯಕ್ರಮ ನಿರೂಪಣೆ ಮತ್ತು ಪ್ರಾಸ್ತಾವಿಕ ನುಡಿಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಸ್. ಸುನೀಲ್ ಕುಮಾರ್ ನುಡಿದರು.
ರೇಂಜರ್ ಘಟಕದ ಸಂಚಾಲಕಿಯಾದ ಕುಸುಮ ಕೆ.ಪಿ. ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸರಿತಾ, ನಯನ ಪ್ರಾರ್ಥಿಸಿದರು.ಸೋನ ಸರ್ವರಿಗೂ ವಂದಿಸಿದರು.