ಕುಶಾಲನಗರ, ಅ 19: ಕೂಡುಮಂಗಳೂರು ಹಾಗೂ ಕೂಡ್ಲೂರು ಅವಳಿ ಗ್ರಾಮಗಳ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಹೆದ್ದಾರಿ ಬದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 15 ಲಕ್ಷ ವೆಚ್ಚದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಎನ್.ಪವನಕುಮಾರ್, ಭಕ್ತಾಧಿಗಳ ಸಹಕಾರದಿಂದ ಈಗಾಗಲೇ ದೊಡ್ಡಮ್ಮನ ಬನದಲ್ಲಿನ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಹಾಗೆಯೇ ದೇವಾಲಯದ ಮತ್ತಷ್ಟು ಅಭಿವೃದ್ದಿ ಕಾರ್ಯಗಳಿಗೆ ಅನುಕೂಲವಾಗುವಂತೆ ದೇವಾಲಯದ ಆವರಣದಲ್ಲಿ ಹೆದ್ದಾರಿಗೆ ಅಭಿಮುಖವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಸಮಿತಿ ಉದ್ದೇಶಿಸಿದ್ದು ಅದರಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಕುಶಾಲನಗರದ ಸುಬ್ರಾಮ ಭಟ್ ಪೂಜಾ ವಿಧಿ ನಡೆಸಿದರು.
ಈ ಸಂದರ್ಭ ಸಮಿತಿಯ ಖಜಾಂಚಿ ಕೆ.ಆರ್. ಶಿವಣ್ಣ, ಹಿರಿಯರಾದ ಕೆ.ಎಸ್. ರಾಜಾಚಾರ್, ಕೆ.ಕೆ.ಮಂಜುನಾಥ ಕುಮಾರ್, ವಿ.ಎಂ.ಮಂಜುನಾಥ್, ವೆಂಕಟೇಶ್, ನಂಜುಂಡರಾಜ ಅರಸು, ವೈ.ಟಿ.ಪರಮೇಶ್, ದೇವಾಲಯದ ಅರ್ಚಕ ಕರಿಯಪ್ಪ ಮೊದಲಾದವರಿದ್ದರು.
Back to top button
error: Content is protected !!