ಕುಶಾಲನಗರ, ಅ 19: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರು ಗ್ರಾಮದ ಹಾರಂಗಿ ನದಿ ದಂಡೆಯಲ್ಲಿ ಹಗಲು ವೇಳೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ.
ಬೆಂಡೆಬೆಟ್ಟ ಮೀಸಲು ಅರಣ್ಯದಿಂದ ಮರಿಯಾನೆಗಳೊಂದಿಗೆ ಲಗ್ಗೆಯಿಟ್ಟ 10 ಕ್ಕೂ ಅಧಿಕ ಕಾಡಾನೆಗಳ ಹಿಂಡು ಹಾರಂಗಿ ನದಿಗೆ ಇಳಿದು ದಾಹ ತಣಿಸಿಕೊಂಡು ವಿಶ್ರಮಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ನಿರಂತರವಾಗಿ ಬೆಳೆ ಹಾನಿ ಉಂಟಾಗುತ್ತಿದ್ದು ಇದೀಗ ಈ ಕಾಡಾನೆಗಳ ಹಿಂಡನ್ನು ಕಂಡ ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ.
Back to top button
error: Content is protected !!