ಕುಶಾಲನಗರ, ಅ 18: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನಡೆದಿದ್ದು ಅಲ್ಲಿಂದ ಸಂಗ್ರಹಿಸಿದ ತೀರ್ಥವನ್ನು ಬುಧವಾರ ಕುಶಾಲನಗರ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ವಿತರಣೆ ನಡೆಯಲಿದೆ.
ಕುಶಾಲನಗರ ಕಾವೇರಿ ತೀರ್ಥ ವಿತರಣೆ ಸಮಿತಿ ವತಿಯಿಂದ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ದೇವಾಲಯಗಳು ಸೇರಿದಂತೆ ಕಾರು ನಿಲ್ದಾಣದಲ್ಲಿ ತೆರೆದ ವಾಹನದಲ್ಲಿ ತೀರ್ಥ, ಪ್ರಸಾದ ವಿತರಣೆ ನಡೆಯಲಿದೆ. ಕೂಡುಮಂಗಳೂರು ಚಿಕ್ಕತ್ತೂರಿನ ವಿನಾಯಕ ಗೆಳೆಯರ ಬಳಗದಿಂದ ತೀರ್ಥ ವಿತರಣೆ ಹಾಗೂ ಬಾರವಿ ಕನ್ನಡ ಸಂಘದಿಂದ ಕೊಡಗು-ಮೈಸೂರು ಗಡಿ ಕಾವೇರಿ ಪ್ರತಿಮೆ ಬಳಿ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
Back to top button
error: Content is protected !!