ಕುಶಾಲನಗರ, ಅ 17: ಸೋಮವಾರಪೇಟೆ ಶಾಂತಳ್ಳಿಯ ಬೀದಳ್ಳಿ ಗ್ರಾಮದ ಅಯತಾನ ರೆಸಾರ್ಟ್ ನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಕುಶಾಲನಗರ ಮತ್ತು ಶಾಂತಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ವೈದ್ಯರಾದ ಡಾ.ಇಂದೂಧರ್, ಡಾ.ಕರುಂಬಯ್ಯ, ಡಾ.ಚಾರುಮತಿ ತಪಾಸಣಾ ಕಾರ್ಯ ನಡೆಸಿದರು. ರೆಸಾರ್ಟ್ ಸಿಬ್ಬಂದಿ, ನೌಕರ ವೃಂದದವರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಗಾದರು. ಈ ಸಂದರ್ಭ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಶಾಂತಳ್ಳಿ ಆರೋಗ್ಯ ಕೇಂದ್ರದ ರವಿ, ಆನಂದ್ ಇದ್ದರು.
ರೆಸಾರ್ಟ್ ಮಾಲೀಕರಾದ ಟೋನಿ ವಿನ್ಸೆಂಟ್ ಹಾಗೂ ಮ್ಯಾನೇಜರ್ ಪ್ರದೀಪ್ ಅವರು ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಪ್ರತಿ ವರ್ಷ ರಕ್ತದಾನ ಶಿಬಿರ ಏರ್ಪಡಿಸುವುದಾಗಿ ತಿಳಿಸಿದ್ದಾರೆ.
Back to top button
error: Content is protected !!