ಕುಶಾಲನಗರ, ಅ 18: ಕುಶಾಲನಗರದ ಕಾವೇರಿ ತೀರ್ಥ ವಿತರಣಾ ಸಮಿತಿ ವತಿಯಿಂದ ಕುಶಾಲನಗರ ತಾಲೂಕಿನಾದ್ಯಂತ ಕಾವೇರಿ ತೀರ್ಥ ವಿತರಣೆ ಕಾರ್ಯ ನಡೆಯಿತು.
ಕುಶಾಲನಗರ ಕಾರು ನಿಲ್ದಾಣದಿಂದ ತೀರ್ಥ ವಿತರಣೆ ಕಾರ್ಯಕ್ರಮಕ್ಕೆ ಸಿದ್ದಲಿಂಗಪುರದ ಮಂಜುನಾಥ ದೇವಾಕಯದ ಶ್ರೀ ರಾಜೇಶನಾಥ ಸ್ವಾಮೀಜಿ ತೀರ್ಥ ವಿತರಣೆ ವಾಹನಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಆಶೀರ್ವಚನ ನೀಡಿದ ಅವರು, ರಾಜ್ಯದ ಜೀವನಾಡಿಯಾಗಿರುವ ಕಾವೇರಿ ನಮ್ಮ ಜಿಲ್ಲೆಯಲ್ಲಿ ಉಗಮವಾಗುತ್ತಿರುವುದು ನಮ್ಮೆಲ್ಲರ ಪುಣ್ಯ. ಕಾವೇರಿ ಮಾತೆಯ ಆರಾಧನೆ, ಸಂರಕ್ಷಣೆ ನಮ್ಮೆಲ್ಲರ ಪ್ರಥಮ ಜವಾಬ್ದಾರಿಯಾಗಬೇಕಿದೆ ಎಂದರು. ತಲಕಾವೇರಿಯಿಂದ ಸಂಗ್ರಹಿಸಿ ತಂದ ತೀರ್ಥವನ್ನು ಸಾರ್ವಜನಿಕವಾಗಿ ವಿತರಿಸುವುದರಿಂದ ತಲಕಾವೇರಿಗೆ ತೆರಳಲು ಸಾಧ್ಯವಾದ ಭಕ್ತರಿಗೆ ಅನುಕೂಲ ಒದಗಿಸಲಿದೆ ಎಂದರು.
ತೀರ್ಥ ವಿತರಣೆ ಸಮಿತಿ ಪ್ರಮುಖ ಕೆ.ಎಸ್.ಶಶಿಕುಮಾರ್ ಗೌಡ ಮಾತನಾಡಿ, ತಲಕಾವೇರಿಯಿಂದ ತಂದ ತೀರ್ಥವನ್ನು ತಾಲೂಕಿನಾದ್ಯಂತ ತೆರೆದ ವಾಹನಗಳಲ್ಲಿ ದೇವಾಲಯಗಳು ಸೇರಿದಂತೆ ಸಾರ್ವಜನಿಕರಿಗೆ ವಿತರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರು ನಿಲ್ದಾಣದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭ
ಕಾವೇರಿ ತೀರ್ಥ ವಿತರಣಾ ಸಮಿತಿ ಪ್ರಮುಖರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಕೆ.ಡಿ.ಪ್ರಶಾಂತ್, ರವಿ, ಶಿವಾಜಿ, ಮಂಜು, ಹರೀಶ್, ಮಹೇಶ್ ಮತ್ತಿತರರು ಇದ್ದರು.
Back to top button
error: Content is protected !!