ಪ್ರಕಟಣೆ
ಜನಸೇವಾ ಟ್ರಸ್ಟ್ ಆಶ್ರಮದ ರೂಪಾ ರಮೇಶ್ ನಿಧನ
ಕುಶಾಲನಗರ, ಅ :10: ಕೊಡಗಿನ ವಿಕಾಸ್ ಜನ ಸೇವಾ ಟ್ರಸ್ಟ್ ನ ದಿ.ರಮೇಶ್ ಅವರ ಪತ್ನಿ ಕೂಡ ನಿಧನರಾದರು.
ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವನ್ನಪ್ಪಿದ ರಮೇಶ್ ಅವರ ಪತ್ನಿ ರೂಪ ಕೂಡ ಚಿಕಿತ್ಸೆ ಫಲಕಾರಿ ಆಗದೆ ಮೈಸೂರು ಆಸ್ಪತ್ರೆಯಲ್ಲಿ ಸೋಮವಾರ ನಡು ರಾತ್ರಿ ಕೊನೆಯುಸಿರು ಎಳೆದಿದ್ದಾರೆ.
ನಾಲ್ಕು ದಿನಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿ ಇದ್ದರು.
ವಿಕಾಸ್ ಜನ ಸೇವಾ ಟ್ರಸ್ಟ್ ಮೂಲಕ ಪ್ರಸ್ತುತ 32 ಜೀವಗಳಿಗೆ ಆಶ್ರಯ ನೀಡಿದ್ದ ರಮೇಶ್ ರೂಪ ದಂಪತಿ ದುರಂತ ಸಾವು.