ಕುಶಾಲನಗರ, ಸೆ 27: ಬೀಟೆ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಹಚ್ಚಿದ ಅರಣ್ಯ ಇಲಾಖೆ ಓರ್ವ ಆರೋಪಿಯನ್ನು ವಾಹನ ಹಾಗೂ ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ. ಚಿಕ್ಕತ್ತೂರು ಗ್ರಾಮದ ಮೂರ್ತಿ ಎಂಬವರ ಪುತ್ರ ಸಿ.ಎಂ.ಮೋನೇಶ್ (26) ಬಂಧಿತ ಆರೋಪಿ.
ಮಂಗಳವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಇಲಾಖೆಯವರು ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ತಪಾಸಣೆ ಕೈಗೊಂಡ ಸಂದರ್ಭ ಹಾರಂಗಿ-ಚಿಕ್ಕತ್ತೂರು ಕಡೆಯಿಂದ ಬಂದ ಟ್ರಾಕ್ಟರ್ ವೇಗವಾಗಿ ನಿಲ್ಲಿಸದೇ ಹೋದ ಸಂದರ್ಭ ಇಲಾಖಾ ವಾಹನದಲ್ಲಿ ಟ್ರಾಕ್ಟರ್‌ನ್ನು ಬೆನ್ನಟ್ಟಿ ಅದರಲ್ಲಿದ್ದ ಒಬ್ಬಾತನನ್ನು ವಶಕ್ಕೆ ಪಡೆಯಲಾಯಿತು. ಉಳಿದ 3 ಜನ ಕತ್ತಲಲ್ಲಿ ತಪ್ಪಿಸಿಕೊಂಡು ತೆಲೆ ಮರೆಸಿಕೊಂಡಿರುತ್ತಾರೆ. ಸದರಿ ವ್ಯಕ್ತಿಯನ್ನು ವಿಚಾರಸಲಾಗಿ ಅತ್ತೂರು ಮೀಸಲು ಅರಣ್ಯದಿಂದ ಒಂದು ಬೀಟೆ ಮರವನ್ನು ತುಂಡು ಮಾಡಿ ಟ್ರ್ಯಾಕ್ಟರ್ ಗೆ ತುಂಬಿಸಿ ಕುಶಾಲನಗರ ಕಡೆಗೆ ತರುತ್ತಿರುವುದಾಗಿ ತಿಳಿದುಬಂದಿದೆ.
ಚಿಕ್ಕತ್ತೂರಿನ ಪ್ರಕಾಶ್ ಎಂಬವರ ಪುತ್ರ ದಿಲಿಪ.ಸಿ.ಪಿ( 22), ಸಿದ್ದಪ್ಪ ಎಂಬವರ ಪುತ್ರ ಗಿರೀಶ್ (46), ಚೇಲವಪ್ಪ ಎಂಬವರ ಪುತ್ರ ಶ್ರೀನಿವಾಸ ಅಲಿಯಾಸ ಸಿನಿ (38) ತೆಲೆ ಮರೆಸಿಕೊಂಡಿದ್ದಾರೆ.
ಟ್ರಾಕ್ಟರ್ ( KA-55 1-8510) ಮತ್ತು ಅದರಲ್ಲಿದ್ದ 9 ಬೀಟೆ ನಾಟಗಳ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Back to top button
error: Content is protected !!