ಅರಣ್ಯ ವನ್ಯಜೀವಿ

ಬಾಲಕನನ್ನು ಬಲಿ ಪಡೆದ ನರಭಕ್ಷಕ ಹುಲಿ ಸೆರೆ

ಬಾಲಕ ಚರಣ್ ನಾಯಕ್ ನನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಗಂಡು ಹುಲಿ ಸೆರೆ

ಹೆಚ್.ಡಿ.ಕೋಟೆ,‌ಸೆ 20: ಸೆ 4 ರಂದು ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ ಎಂಬ ಬಾಲಕನನ್ನು ‌ಬಲಿ‌ಪಡೆದ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲಾಗಿದೆ.

7 ರಿಂದ 8 ವರ್ಷದ ಹುಲಿಯನ್ನು ಮಂಗಳವಾರ ಸಂಜೆ 7-20ರ ಸಮಯದಲ್ಲಿ, ಕಲ್ಲಟಿ ಗ್ರಾಮದ ತಾವರೆ ನಾಯಕ ಎಂಬುವರ ಜಮೀನಿನ ಬಳಿ ಅರವಳಿಕೆ ವೈದ್ಯರಾದ ಡಾ,:ರಮೇಶ್, ರಂಜನ್ ಇವರುಗಳು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹುಲಿಗೆ ಅರವಳಿಕೆ ಹೊಡೆದು ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!