ಕುಶಾಲನಗರ, ಸೆ 05: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಣ್ಣ ನಿವೃತ್ತಿ ಸಂದರ್ಭ ಚೆಕ್ ದುರುಪಯೋಗಕ್ಕೆ ಪ್ರಯತ್ನಿಸಿದ್ದರು. ಇದನ್ನು ತಡೆದು ಅವರಿಗೆ ಸಂದಾಯವಾಗಬೇಕಿದ್ದ ಎಲ್ಲಾ ಮೊತ್ತವನ್ನು ಪಾವತಿಸಲಾಗಿದೆ. ಹಿರಿಯರ ಸ್ಥಾನದಲ್ಲಿದ್ದು ಮಾರ್ಗದರ್ಶನ ನೀಡಬೇಕಾದವರು ವಿನಾಕಾರಣ ಅನಗತ್ಯ ಚರ್ಚೆ ಸಂದರ್ಭ ಅವರ ಮಾಡಿದ ಚೆಕ್ ಪ್ರಕರಣವನ್ನು ಬಹಿರಂಗವಾಗಿ ಸಭೆಗೆ ತಿಳಿಸಲಾಯಿತು. ಆದರೆ ಇದರ ವಿರುದ್ದ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆಗೆ ತಾನು ಜಗ್ಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ತನ್ನ ವಿರುದ್ದ ಅಧ್ಯಕ್ಷರು ಮೋಸ ವಂಚನೆ ಕರ್ತವ್ಯ ಲೋಪದ ವಗ್ಗೆ ಆರೋಪ ಮಾಡಿದ್ದು ಇದನ್ನು ದಾಖಲೆ ಸಹಿತ ಬಹಿರಂಗಪಡಿಸಲು ಆಗ್ರಹಿಸಿ ಶಿವಣ್ಣ ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಘದ ಹಾಲಿ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಶಿವಣ್ಣ ಅವರು ನಿವೃತ್ತಿ ಸಂದರ್ಭ ಅವರನ್ನು ಅತ್ಯಂತ ಗೌರವಯುತವಾಗಿ ಬೀಳ್ಕೊಡಲಾಗಿದೆ. ಆದರೆ ಅವರು ಕಛೇರಿ ತೊರೆಯುವ ಸಂದರ್ಭ ಸಹಿ ಹಾಕಿದ್ದ ಖಾಲಿ ಚೆಕ್ ಅನ್ನು ಅನುಮತಿ ಇಲ್ಲದೆ ಮನೆಗೆ ಕೊಂಡೊಯ್ದಿದ್ದರು. ಇದು ಗಮನಕ್ಕೆ ಬಂದ ಸಂದರ್ಭ ಪೊಲೀಸ್ ದೂರು ನೀಡುವುದಾಗಿ ತಿಳಿಸಿದ ನಂತರ ಚೆಕ್ ವಾಪಾಸ್ ಮಾಡಿದರು. ಖಾಲಿ ಚೆಕ್ ಗೆ ಸ್ವತಃ ಇವರೇ 5,82,404 ಮೊತ್ತ ದಾಖಲಿಸಿ ವಿತ್ ಡ್ರಾ ಮಾಡಲು ಮುಂದಾಗಿದ್ದರು.
ಇವರಿಗೆ ದೊರೆಯಬೇಕಾದ ಮೊತ್ತಕ್ಕಿಂತ ಹೆಚ್ಚಾಗಿ 30 ಸಾವಿರ ಸುಳ್ಳು ಲೆಕ್ಕ ತೋರಿಸಿ ನಗದೀಕರಿಸುವ ಪ್ರಯತ್ನ ತಡೆಹಿಡಿಯಲಾಯಿತು.
ಅವರಿಗೆ ದೊರೆಯಬೇಕಾದ ನಿವೃತ್ತಿ ರಜಾ ಸಂಬಳ, ಗ್ರಾಚ್ಯುಟಿ ನಿಯಮಾನುಸಾರ ಒದಗಿಸಲು ಕ್ರಮವಹಿಸಲಾಗಿತ್ತು. ಆಡಿಟ್ ಆಗುವ ಮುನ್ನವೇ ನನಗೆ ಸೇರಬೇಕಾದ ಹಣಕ್ಕಾಗಿ ಚೆಕ್ ಕೊಂಡೊಯ್ದಿರುವುದಾಗಿ ತಿಳಿಸಿ ನಂತರ ಖಾಲಿ ಚೆಕ್ ವಾಪಾಸ್ ಮಾಡಿದ್ದರು. ದೊರೆಯಬೇಕಾದ ಮೊತ್ತದಲ್ಲಿ ಕೂಡ ಹೆಚ್ಚುವರಿಯಾಗಿ ಸುಳ್ಳು ಲೆಕ್ಕ ತೋರಿಸಿ ಖಾಲಿ ಚೆಕ್ ಮೂಲಕ ಅಕ್ರಮ ಎಸಗಲು ಮುಂದಾಗಿದ್ದರು. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆ ನನ್ನ ಬಳಿಯಿದೆ. ಎಲ್ಲವೂ ಕೂಡ ಸಂಘದ ನಡಾವಳಿ ಪುಸಕ್ತದಲ್ಲಿ ದಾಖಲಿಸಲಾಗಿದೆ. ಅವರಿಗೆ ಸೇರಬೇಕಾದ ಹಣವನ್ನು ಹಂತಹಂತವಾಗಿ ಸಂಪೂರ್ಣವಾಗಿ ಒದಗಿಸಲಾಗಿದೆ.
ಇದನ್ನು ಎಲ್ಲಿ ಬೇಕಾದರೂ ಸಾಬೀತುಪಡಿಸಲು ತಾನು ಸಿದ್ದವಿರುವುದಾಗಿ ತಿಳಿಸಿದ ಹೇಮಂತ್ ಕುಮಾರ್, ಶಿವಣ್ಣ ಅವರ ಬೆದರಿಕೆಗೆ ಜಗ್ಗುವುದಿಲ್ಲ ಎಂದಿರುವ ಅವರು ಈ ಸಂಬಂಧ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
Back to top button
error: Content is protected !!