ಕುಶಾಲನಗರ ಸೆ 4:’ಕರ್ನಾಟಕ’ ಎಂಬ ಹೆಸರನ್ನು ನಾಮಕರಣ ಮಾಡಿ ೫೦ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಮೈಸೂರು ವಿಭಾಗ ಮಟ್ಟದ ಸಾಹಿತಿ- ಕಲಾವಿದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆಯು ಮೈಸೂರಿನ ಕಿರು ರಂಗಮಂದಿರದಲ್ಲಿ ಸೋಮವಾರ ನಡೆಯಿತು. ಕೊಡಗು ಜಿಲ್ಲೆಯಿಂದ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಲೋಕೇಶ್ ಸಾಗರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಪಾರ್ವತಿ ಅಪ್ಪಯ್ಯ, ಬಿ.ಎಸ್.ತಮ್ಮಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕೊಡಗು ಜಾನಪದ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷರಾದ ಅನಿಲ್ ಎಚ್.ಟಿ, ರೇಖಾ ವಸಂತ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ಲಿಯಾಕತ್ ಅಲಿ, ನಾಗೇಶ್ ಕಾಲೂರು, ಟಿ.ಜಿ.ಪ್ರೇಮಕುಮಾರ್, ವೆಂಕಟ ನಾಯಕ್, ರೇವತಿ ರಮೇಶ್, ಕುಡಿಯರ ಶಾರದ, ಕಲಾವಿದ ಈ.ರಾಜು ಇತರರು ಇದ್ದರು. ನಾಡಹಬ್ಬ ಮಡಿಕೇರಿ ಜನೋತ್ಸವ ದಸರಾಗೆ ಆಗಮಿಸುವಂತೆ ಇದೇ ಸಂದರ್ಭದಲ್ಲಿ ಸಚಿವರಲ್ಲಿ ಮನವಿ ಮಾಡಿದರು.
Back to top button
error: Content is protected !!