ಕುಶಾಲನಗರ, ಫೆ 04: ಕರ್ನಾಟಕ ರಾಜ್ಯ ಸರ್ಕಾರ ಹೋಟೆಲ್ ರೆಸಾರ್ಟ್ ಅಂಗಡಿ ಮತ್ತು ಕೈಗಾರಿಕಾ ಸಂಸ್ಥೆಗಳ ಸೇರಿದಂತೆ ಎಲ್ಲಾ ವಾಣಿಜ್ಯ ವಹಿವಾಟು ಮಾಡುವವರು ಕಡ್ಡಾಯವಾಗಿ ಕನ್ನಡ ನಾಮಫಲಕ ಶೇಕಡಾ 60 ಭಾಗ ಕನ್ನಡದಲ್ಲಿ ಹಾಕಬೇಕೆಂದು ಆದೇಶ ಹೊರಡಿಸಿದೆ. ಆದರೆ ಟೀಬೆಟ್ ಕ್ಯಾಂಪ್ ನಲ್ಲಿ ಹೋಟೆಲ್ ರೆಸಾರ್ಟ್ ಅಂಗಡಿ ವಾಣಿಜ್ಯ ವಹಿವಾಟು ಮಾಡುವವರು ಕೆಲವು ವ್ಯಾಪಾರಿಗಳು ಕನ್ನಡವನ್ನು ಒಂದು ಪರ್ಸೆಂಟ್ ಸಹ ಬಳಕೆ ಮಾಡುತ್ತಿಲ್ಲ. ವ್ಯಾಪಾರಿಗಳು ನೆಪ ಮಾತ್ರಕ್ಕೆ ಹತ್ತು ಪರ್ಸೆಂಟ್ ಕನ್ನಡ ಹಾಕಿ ಬಾಕಿ 90 ಭಾಗ ಬೇರೆ ಭಾಷೆಯ ನಾಮಫಲಕ ಹಾಕಿರುವುದು ಖಂಡನೀಯ.
ತಾವು ಈಗಲೇ ಎಲ್ಲಾ ಅಂಗಡಿ ಮಾಲೀಕರಿಗೆ ಶೇ ಅರವತ್ತು ಭಾಗ ಕನ್ನಡ ನಾಮ ಫಲಕ ಹಾಕುವಂತೆ ಆದೇಶ ಮಾಡಬೇಕೆಂದು ಕರ್ನಾಟಕ ಕಾವಲುಪಡೆ ವತಿಯಿಂದ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಬೈಲುಕೊಪ್ಪ ಟಿಬೇಟ್ ಕ್ಯಾಂಪ್ ವ್ಯವಸ್ಥಾಪಕ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
Back to top button
error: Content is protected !!