ಕಾರ್ಯಕ್ರಮ

ಕುಶಾಲನಗರ: ಜೆಸಿಐ ವತಿಯಿಂದ ಭಾಷಣ ಕಲೆ ಕುರಿತ ತರಬೇತಿ

ಕುಶಾಲನಗರ, ಸೆ.3: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಭಾನುವಾರ ( ಸೆಪ್ಟೆಂಬರ್ 3 ರಂದು ) ಕುಶಾಲನಗರ ಪಟ್ಟಣದ ಮಹಾಲಕ್ಷ್ಮಿ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ Effective Public Speaking ಪರಿಣಾಮಕಾರಿ ಭಾಷಣ ಕಲೆ &
Personal Development ವೈಯಕ್ತಿಕ ‌ಬೆಳವಣಿಗೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಜೆಸಿಐ ಕಾವೇರಿ ಸಂಸ್ಥೆಯ ಅಧ್ಯಕ್ಷರಾದ ಎಂ.ಜೆ.ರಜನೀಕಾಂತ್ ಮಾತನಾಡಿ, ಈ ತರಬೇತಿಯು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗದಲ್ಲಿ ಪರಿಣಾಮಕಾರಿ ಭಾಷಣ ಮಾಡುವ ಕಲೆಯ ಕೌಶಲ್ಯ ಬೆಳೆಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಸಿಐ ನ ಹಿರಿಯ ವಿಭಾಗದ ಎಸ್.ಎಂ.ಎ.ವಿಭಾಗ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಜೆಸಿಐ ಸಂಸ್ಥೆಯ ಮೂಲಕ‌ ಯುವ ಜನಾಂಗದಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಅವರನ್ನು ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ತರಬೇತುದಾರ ಪ್ರಜ್ವಲ್ ಜೈನ್ ಮಾತನಾಡಿ, ಭಾಷಣ ಎಂದರೆ ಸಮೂಹದ ಮುಂದೆ ಆಡುವ ಬರೀ ಮಾತಲ್ಲ. ವಿಚಾರಗಳ ಮೊತ್ತವೂ ಅಲ್ಲ. ನಮ್ಮ ಭಾವನೆಗಳನ್ನು ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಮಾಧ್ಯಮ ಎಂದರೆ ಭಾಷೆ ಪರಸ್ಪರ ಮಾತುಕತೆಯಲ್ಲಿ ಬಳಸುವ ಭಾಷೆಯ ಸಂಭಾಷಣೆ ಎನಿಸುತ್ತದೆ ಎಂದರು.

ಒಬ್ಬ ವ್ಯಕ್ತಿಯ ಜನಸಮೂಹದ ಎದುರಿಗೆ ತನ್ನ ವಿಚಾರಗಳನ್ನು ಮಂಡಿಸುವುದಕ್ಕೆ ಭಾಷಣ ಎಂದು ಕರೆಯಲಾಗುತ್ತದೆ. ಅದು ಹೇಗಿರಬೇಕು ಎಂಬುದು ಒಂದು ಕಲೆಯಾಗಿದೆ ಎಂದು ತರಬೇತಿಯ ಸಂಪನ್ಮೂಲ ವ್ಯಕ್ತಿ ಸುಷ್ಮಾ ಹಿರೇಮಠ್ ತಿಳಿಸಿದರು.
ತರಬೇತಿಯ ರಾಷ್ಟ್ರೀಯ ತರಬೇತುದಾರರಾದ ಪ್ರಜ್ವಲ್ ಜೈನ್ ಮತ್ತು ಸುಷ್ಮಾ ಹಿರೇಮಠ್ ಉತ್ತಮ ಹಾಗೂ ಪರಿಣಾಮಕಾರಿ ಭಾಷಣ ಕಲೆ ಹಾಗೂ ವೈಯಕ್ತಿಕ ಬೆಳವಣಿಗೆ ಕುರಿತು ತರಬೇತಿ ನೀಡಿ ತರಬೇತುದಾರರೊಂದಿಗೆ ಸಂವಾದ ನಡೆಸಿದರು.
ಜೆಸಿಐ ನ ವಲಯ ಉಪಾಧ್ಯಕ್ಷ ಕೆ.ಡಿ.ಪ್ರಶಾಂತ್, ಜೆಸಿಐ ನ ವಲಯ ನಿಕಟ ಪೂರ್ವ ಉಪಾಧ್ಯಕ್ಷ ಕೆ.ಪ್ರವೀಣ್,
ಸುಂಟಿಕೊಪ್ಪ ಜೆಸಿಐ ಘಟಕದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಜೆಸಿಐ ಕಾವೇರಿ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಅಮೃತ್ ರಾಜ್, ಸಂಸ್ಥೆಯ ಕಾರ್ಯದರ್ಶಿ ಬಿ. ಜಗದೀಶ್, ಸದಸ್ಯ
ಕೆ.ಆರ್.ಸುಮನ್ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!