ಕುಶಾಲನಗರ ಸೆ 4: ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯಲ್ಲಿ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡಮಿ” ವತಿಯಿಂದ ನಡೆದ ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ದಿಗಂತ್.ಕೆ.ಪಿ, ದ್ವಿತೀಗ ಸ್ಥಾನವನ್ನು ಚೈತನ್ಯ.ಎಂ.ಡಿ ಹಾಗೂ ತೃತೀಯ ಸ್ಥಾನವನ್ನು ನಿಷಾಂತ್.ಕೆ.ಜೆ ಪಡೆದುಕೊಂಡರು. ಕೈ ಬರಹ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಫರ್ಹಾನೆ.ಎ.ಕೆ, ದ್ವಿತೀಯ ಸ್ಥಾನ ದನುಷ್.ಎಂ ಹಾಗೂ ತೃತೀಯ ಸ್ಥಾನವನ್ನು ಮಾನಸ.ಯು.ಕೆ ಪಡೆದರು. ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯಲ್ಲಿ ಸುಮಾರು ೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಯೋಜಕ ಅಕ್ತರ್ ಹಾಗೂ ಫಾತಿಮಾ ಪ್ರೌಢ ಶಾಲಾ ಶಿಕ್ಷಕ ವೃಂದದವರು ಇದ್ದರು.
Back to top button
error: Content is protected !!