ಧಾರ್ಮಿಕ

ಕುಶಾಲನಗರ ಫಾತಿಮ‌ ಕಾನ್ವೆಂಟ್ ನಲ್ಲಿ ಓಣಂ ಸಂಭ್ರಮ

ಕುಶಾಲನಗರ, ಆ 29: ಕುಶಾಲನಗರದ ವಿವಿಧ ಸಂಭ್ರಮದ ಓಣಂ ಆಚರಣೆ ನಡೆಯಿತು. ಮಲೆಯಾಳಿ ಸಮುದಾಯ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಓಣಂ ಹಬ್ಬವನ್ನು ವರ್ಣರಂಜಿತ ಪೂಕಳಂ ರಚಿಸುವ ಮೂಲಕ ಮೆರುಗು ನೀಡಲಾಯಿತು.

ಓಣಂ ಅನೇಕ ಆಸಕ್ತಿದಾಯಕ ಆಚರಣೆಗಳನ್ನು ಹೊಂದಿದೆ. ಅತ್ಯಂತ ವರ್ಣರಂಜಿತ ಓಣಂ ಆಚರಣೆಗಳಲ್ಲಿ ಒಂದು ಹೂವಿನ ರಂಗೋಲಿಗಳು ಅಥವಾ ಪೂಕಳಂಗಳನ್ನು ಮಾಡುವುದು. ಹೆಚ್ಚಾಗಿ ಹೂವುಗಳು ಮತ್ತು ಹೂವಿನ ದಳಗಳನ್ನು ಇದಕ್ಕಾಗಿ ಬಳಸಲಾಗುತ್ತದೆ, ಆದರೆ ಕೆಲವೊಮ್ಮೆ ಎಲೆಗಳು ಮತ್ತು ವರ್ಣರಂಜಿತ ಬೀಜಗಳನ್ನು ಸಹ ಬಳಸಲಾಗುತ್ತದೆ. ಬಹುತೇಕ ಪ್ರತಿಯೊಂದು ಮನೆಯ ಮುಂಭಾಗದ ಅಂಗಳದಲ್ಲಿ ಸುಂದರವಾದ ಪೂಕ್ಕಳಂ ಇರುತ್ತದೆ. ಕೆಲವು ಸರಳವಾಗಿದ್ದರೆ, ಮತ್ತು ಕೆಲವು ವಿನ್ಯಾಸದಲ್ಲಿ ಬಹಳ ಸಂಕೀರ್ಣವಾಗಿರುತ್ತದೆ. ಶಾಲೆ, ಕಾಲೇಜು, ಕಛೇರಿ ಇತ್ಯಾದಿಗಳಲ್ಲಿಯೂ ಪೂಕಳಂ ಸ್ಪರ್ಧೆಗಳು ನಡೆಯುತ್ತವೆ.
ಪಟ್ಟಣದ ಫಾತೀಮಾ ಕಾನ್ವೆಂಟ್ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಪೂಕ್ಕಳಂ ಎಂಬ ಆಕರ್ಷಕ ಹೂವಿನ ಅಲಂಕಾರವನ್ನು ಶಿಕ್ಷಕರು ರಚಿಸಿದರು. ಅಸಾಧಾರಣವಾಗಿ ಅಲಂಕೃತಗೊಂಡ ಕಲಾಕೃತಿಯನ್ನು ಕಂಡು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಓಣಂ ಹಬ್ಬದ ಕುರಿತಂತೆ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸ್ಪಂದನಾ ಮಾತನಾಡಿ, ಭಾರತವು ವಿವಿಧತೆಯ ಸಂಸ್ಕೃತಿಯನ್ನು ಪಸರಿಸುವ ದೇಶ. ದೇಶವು ಪ್ರಾಂತ, ಮತ, ಭೇದವನ್ನು ಮೆಟ್ಟಿ ನಿಂತಿರುವ ದೇಶ. ಓಣಂ ಎಲ್ಲರಿಗೂ ಶುಭ ತರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!